ದಾವಣಗೆರೆ: ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ನಿಂದ ನಗರದಲ್ಲಿ ಬೃಹತ್ ಆಟೋ ರ್‍ಯಾಲಿಗೆ ಬಿಜೆಪಿ ಮುಖಂಡರುಗಳಾದ ಲೋಕಿಕೆರೆ ನಾಗರಾಜ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಚಾಲನೆ ನೀಡಿದರು.
ನಗರದ ಹೈಸ್ಕೂಲ್ ಮೈದಾನದ ಆವರಣದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಅಲ್ಲಿಂದ ಹೊರಟ ಆಟೋ ರ್‍ಯಾಲಿಯು ಹಳೇ ಕೋರ್ಟ್ ರಸ್ತೆ, ಪಿಬಿ ರಸ್ತೆ, ವಿನೋಬನಗರ, ಶಾಮನೂರು ರಸ್ತೆ, ಗುಂಡಿ ಮಹದೇವಪ್ಪ ವೃತ, ವಿದ್ಯಾರ್ಥಿ ಭವನ, ಕೆಟಿಜೆ ನಗರ 8ನೇ ಕ್ರಾಸ್, ಭಗತ್ ಸಿಂಗ್ ನಗರ, ಕೆಎಸ್‍ಅರ್ಟಿಸಿ ರಸ್ತೆ, ಮಹಾತ್ಮಗಾಂಧಿ ವೃತ್ತ, ಜಯದೇವ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮತ್ತೆ ನಗರದ ಹೈಸ್ಕೂಲ್ ಮೈದಾನಕ್ಕೆ ಸಾಗಿ ಮುಕ್ತಾಯಗೊಂಡಿತು.
ಈ ವೇಳೆ ಮಾತನಾಡಿದ ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಸಂಚಾಲಕ ಸತೀಶ್ ಪೂಜಾರಿ, ವಿಜಯದಶಮಿ ಹಬ್ಬದ ಅಂಗವಾಗಿ ಇದೇ 5ರಂದು ನಡೆಯಲಿರುವ ಶೋಭಯಾತ್ರೆಯ ಪ್ರಚಾರಕ್ಕಾಗಿ ಇಂದು ಆಟೋ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ಹಿಂದುತ್ವದ ಪ್ರಭೇದದ ಬಗ್ಗೆ, ಹಿಂದುತ್ವದ ಬಗ್ಗೆ ಸಾರ್ವ ಜನಿಕರಲ್ಲಿ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಆಟೋ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚು ಹೆಚ್ಚಾಗಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು ಎಂದರು.
ಪ್ರತಿನಿತ್ಯ ಆಟೋ ಚಾಲನೆ ಮಾಡಿ ಜೀವನ ಸಾಗಿಸುವ ಆಟೋ ಚಾಲಕರು ದೇಶ ಮತ್ತು ಧರ್ಮಕ್ಕಾಗಿ ನಾವು ಯಾವಾಗಲೂ ಸದಾ ಸಿದ್ಧರಾಗಿರುತ್ತೇವೆ ಎನ್ನುವ ಧ್ಯೇಯದೊಂದಿಗೆ ಆಡು ಮುಟ್ಟದ ಸೊಪ್ಪಿಲ್ಲ ಆಟೋ ಸುತ್ತದ ಗಲ್ಲಿ ಇಲ್ಲ ಎನ್ನುವ ರೀತಿಯಲ್ಲಿ ನಾವು ಸದಾ ದೇಶದ ಸೇವೆಗಾಗಿ ಸಿದ್ಧರಾಗಿರುತ್ತೇವೆ ಎನ್ನುವ ಎಚ್ಚರಿಕೆಯನ್ನು ಆಟೋ ಚಾಲಕರು ಇಂದು ನೀಡುತ್ತಿದ್ದಾರೆ ಎಂದು ಹೇಳಿದರು.
PublicNext
03/10/2022 09:20 pm