ನಗರದ ಸಮೀಪ ಇರುವ ಹೊಸ ಕುಂದವಾಡದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಇಂದು ದಸರಾ ಹಬ್ಬ ಆದ ಮೂರು ದಿನಗಳ ನಂತರ ನಡೆಯುವ ಮರಿ ಬನ್ನಿ ಹಬ್ಬ ಆಚರಣೆ ಹಿನ್ನೆಲೆ ಶ್ರೀ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಕೆಂಡಾರ್ಚನೆ ನಡೆಸಲಾಯಿತು.
ಬನ್ನಿ ಮುಡಿದು ಬಂದು ಕೆಂಡ ಹಾಯುವ ಮೂಲಕ ಭಕ್ತರು ಮರಿ ಬನ್ನಿಯನ್ನು ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ಗಂಗಾಪೂಜೆ ನೆರವೇರಿಸಿ ಬನ್ನಿ ಮುಡಿದು ಬಂದು ದೇವಿಯ ಮೂರ್ತಿಯೊಂದಿಗೆ ಕೆಂಡ ಪ್ರವೇಶ ಮಾಡಲಾಗುತ್ತದೆ.
ಈ ವೇಳೆ ಹರಕೆ ಮಾಡಿಕೊಂಡ ಭಕ್ತರು ದುರ್ಗಾದೇವಿಮೂರ್ತಿ ಪಲ್ಲಕ್ಕಿ ಹೊತ್ತು ಕೆಂಡ ಹಾಯುತ್ತಾರೆ. ಹರಕೆ ಈಡೇರಿದ ಭಕ್ತರು ಪ್ರತಿ ವರ್ಷ ಕೆಂಡ ಹಾಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಇನ್ನೂ ಕೆಂಡ ತುಳಿಯಲು ಹೊಸಕುಂದವಾಡಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಶ್ರದ್ಧಾ ಭಕ್ತಿಗಳಿಂದ ಹರಕೆ ತೀರಿಸಿ ಕೃಪೆಗೆ ಪಾತ್ರರಾದರು.
PublicNext
08/10/2022 01:19 pm