ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಜಗಳೂರು-ದಾವಣಗೆರೆ ವಾಹನ ಸಂಚಾರ ಸ್ಥಗಿತ

ಸತತವಾಗಿ ಸುರಿದ ಮಳೆಯಿಂದಾಗಿ ಕೆರೆಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಣಜಿ ಕೆರೆ, ಕೋಡಿಯಲ್ಲಿ ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿದ್ದು, ಜಗಳೂರು-ದಾವಣಗೆರೆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ.

4 ದಶಕಗಳಲ್ಲಿ ಮೊದಲ ಬಾರಿಗೆ ಈಚೆಗೆ ತುಂಬಿದ್ದ ಅಣಜಿ ಕೆರೆಯ ಪೂರ್ವ ಭಾಗದ ಕೋಡಿ ಪ್ರದೇಶದಲ್ಲಿ 15 ದಿನಗಳಿಂದ ಸಣ್ಣದಾಗಿ ಹರಿಯುತ್ತಿದ್ದ ಕೆರೆಯ ಕೋಡಿ ನೀರಿನ ಹರಿವು ಎರಡು ದಿನಗಳಿಂದ ಹೆಚ್ಚಾಗಿದೆ. ಅಣಜಿ ಕೆರೆಯ ಹಿಂಭಾಗದ ಕಂದನಕೋವಿ ಮುಂತಾದ ಸಣ್ಣಪುಟ್ಟ ಕೆರೆಗಳು ಭರ್ತಿಯಾಗಿದ್ದು , ಅಣಜಿ ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ.

ದಾವಣಗೆರೆ ಮತ್ತು ಜಗಳೂರು ಕಡೆ ಹೋಗುವ ನೂರಾರು ಬಸ್ ಹಾಗೂ ಇತರೆ ವಾಹನಗಳು 12 ಕಿ.ಮೀ ಸುತ್ತುವರಿದು. ಹುಲಿಕಟ್ಟೆ, ಕಂದನಕೋವಿ, ಐಗೂರು, ಅನಗೋಡು ಮಾರ್ಗವಾಗಿ ಸಂಚರಿಸುತ್ತಿವೆ. ಅಣಜಿಗೆ ಸಮೀಪವಿರುವ ರಾಜಕೆರೆ ಸಹ ಕೋಡಿ ಬಿದ್ದು ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಹೆಮ್ಮನಬೇತೂರು, ಕಿತ್ತೂರು, ಕುರುಡಿ ಮಾರ್ಗವೂ ಸಹ ಸ್ಥಗಿತವಾಗಿದೆ.

ಹೀಗಾಗಿ ಅನಿವಾರ್ಯ ಹುಲಿಕಟ್ಟೆ ಮಾರ್ಗವಾಗಿ ಹತ್ತಾರು ಕಿ.ಮೀ ಸುತ್ತವರಿದುಕೊಂಡು ದಾವಣಗೆರೆಯತ್ತ ಸಾಗಬೇಕಿದೆ. ಅಣಜಿ ಕೆರೆ ಕೋಡಿಯಲ್ಲಿ ರಸ್ತೆಯ ಮೇಲೆ ಪ್ರವಾಹದಂತೆ ನೀರು ಹರಿದು ವಿವಿಧ ಹಳ್ಳಿಗಳ ಮೂಲಕ ತುಪ್ಪದಹಳ್ಳಿ ಕೆರೆಗೆ ಹೋಗುತ್ತಿದ್ದು, ತುಪ್ಪದಹಳ್ಳಿ ಕೆರೆಯೂ ಕೋಡಿ ಬಿದ್ದಿದೆ.

Edited By :
PublicNext

PublicNext

03/10/2022 02:44 pm

Cinque Terre

23.99 K

Cinque Terre

0