ನಾಡಹಬ್ಬ ದಸರಾದ ಅಂಗವಾಗಿ ದಾವಣಗೆರೆ ನಗರದ ಮೇಕಪ್ ಆರ್ಟಿಸ್ಟ್ ರೂಪಾ ಸುರೇಶ್ ದುರ್ಗಾದೇವಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾಲಾ ಕಾಲೇಜು ಮಕ್ಕಳಿಗೆ, ರಾಷ್ಟೀಯ ಹಬ್ಬಗಳು ಸೇರಿದಂತೆ ವಿವಿಧ ಮಹನೀಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರಿಗೆ ವಿವಿಧ ಅವತಾರದಲ್ಲಿ ಅವರನ್ನು ಮೇಕಪ್ ಮಾಡಲಾಗುತ್ತಿತ್ತು.
ಕಳೆದ ವರ್ಷ ದಸರಾ ಹಬ್ಬದಲ್ಲಿ ಕಾಳೀ ಅವತಾರದ ಮೇಕಪ್ ಮಾಡಿಕೊಂಡಿದ್ದೆ. ಕೇವಲ ದಸರಾ ಹಬ್ಬದಲ್ಲಿ ಮಾತ್ರವಲ್ಲದೆ ದೀಪಾವಳಿ ಸೇರಿದಂತೆ ಇನ್ನಿತರೆ ವಿಶೇಷ ದಿನಗಳಲ್ಲಿ ವಿವಿಧ ರೀತಿಯಲ್ಲಿ ಮೇಕಪ್ ಮಾಡಿಕೊಳ್ಳುತ್ತೇನೆ. ದಸರಾ ಹಬ್ಬದಲ್ಲಿ ಮಹಿಳೆಯರು ದೇವಿಯರ ಪೂಜೆ ಮಾಡಲು. ಎಲ್ಲೆಲ್ಲೂ ಹೋಗುತ್ತಾರೆ ಆದರೆ ದೇವಿಯನ್ನು ನಾನು ಆವಾಹನೆ ಮಾಡಿಕೊಂಡಿದ್ದೇನೆ.
ದಾವಣಗೆರೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ನನ್ನ ಮೆಕಪ್ ಕಲೆಯನ್ನು ಮೆಚ್ಚಿ ಪ್ರಶಂಸಿಸಿದ್ದಾರೆ. ನವರಾತ್ರಿ ಹಬ್ಬದ ಅಂಗವಾಗಿ ಪ್ರತಿ ದಿನವೂ ಒಂದೊಂದು ದೇವಿಯರ ಅವತಾರದಲ್ಲಿ ಮೇಕಪ್ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಎಲ್ಲರ ನನಗೆ ಪ್ರೋತ್ಸಾಹ ನೀಡುತ್ತಿರುವುದಾಗಿ ಮೇಕಪ್ ಆರ್ಟಿಸ್ಟ್ ರೂಪ ಸುರೇಶ್ ತಿಳಿಸಿದರು.
PublicNext
30/09/2022 06:12 pm