ದಾವಣಗೆರೆ: ರೈಲಿಗೆ ಒಡೆಯರ್ ಹೆಸರು ನಾಮಕರಣ ಮಾಡಿದ್ದು ಒಡೆಯರ್ ಈ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಒಡೆಯರ್ ಅವರು ಅಭಿವೃದ್ದಿ ಹರಿಕಾರರು ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ರಾಜ್ಯಕ್ಕೆ ಸಕ್ಕರೆ ಕಾರ್ಖಾನೆಗಳನ್ನು ತಂದವರು ಒಡೆಯರ ಅವರು. ಟಿಪ್ಪು ಹೆಸರೇ ಗೊಂದಲದಲ್ಲಿದೆ. ಇದೀಗ ಚರ್ಚೆಯಲ್ಲಿದೆ, ಹೀಗಾಗಿ ಒಡೆಯರ್ ಹೆಸರು ಇಟ್ಟಿರುವುದು ಸರಿಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನು, ಈಶ್ವರಪ್ಪ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ನಳೀನ್ ಕುಮಾರ್ ಕಟೀಲು, ನಿನ್ನೆ ನಮ್ಮ ಜೊತೆಗೆ ಇದ್ದರು. ಆಗ ಅವರಿಗೆ ಅಸಮಾಧಾನ ಇರಲಿಲ್ಲ. ಇವತ್ತು ಬೆಳಿಗ್ಗೆ ಅಸಮಾಧಾನ ಆಗಿದ್ದಾರೆ ಎಂದರೆ ನಾನು ನಂಬಲ್ಲ. ಸಂಪುಟ ವಿಸ್ತರಣೆ ಬೇಡಿಕೆ ಇದೆ. ಇದರಲ್ಲಿ ಅಸಮಧಾನ ಏನೂ ಇಲ್ಲ.ಸಂಪುಟ ವಿಸ್ತರಣೆ, ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಇನ್ನು ಅವಧಿ ಮುಂಚೆ ಚುನಾವಣೆ ಬಗ್ಗೆ ಸ್ಪಷ್ಟನೆ ನೀಡಿರುವ ಕಟೀಲು ಅವಧಿ ಮುಂಚೆ ಚುನಾವಣೆ ಆಗಲ್ಲ. ಆದರೆ ಮತ್ತೆ ಗೆದ್ದು ಅಧಿಕಾರಕ್ಕೆ ನಾವೇ ಬರುತ್ತೇವೆ ಎಂದ ಕಟೀಲು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
PublicNext
08/10/2022 10:43 pm