ದಾವಣಗರೆ: ಎಸ್‌ಸಿ, ಎಸ್‌ಟಿ ಸಮುದಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವ ನಿರ್ಧಾರವನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸ್ವಾಗತಿಸಿದ್ದಾರೆ. ಅಲ್ಲದೆ, ಇದಕ್ಕೆ ಬಿಜೆಪಿ ಸರ್ಕಾರಕ್ಕೆ ಕಟೀಲು ಅಭಿನಂದನೆಯನ್ನ ಸಲ್ಲಿಸಿದ್ದಾರೆ.ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಈ ವಿಚಾರದಲ್ಲಿಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಬೇಡಿಕೆ ಈಡೇರಿಸುವ ಜವಾಬ್ದಾರಿಯುತ ಕೆಲಸ ಮಾಡಿರುವ ಸಿಎಂಗೆ ಅಭಿನಂದನೆ ಎಂದಿದ್ದಾರೆ.
ಎಲ್ಲ ಜನರ ಭಾವನೆ ಜೊತೆ ನಿಲ್ಲುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಇದರಿಂದ ಎರಡು ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ. ಕ್ಯಾಬಿನೆಟ್ ನಲ್ಲಿಯೇ ಈ ತೀರ್ಮಾನ ಮಾಡಲಾಗಿದ್ದು, ಮುಂದೆ ಸಾಂವಿಧಾನಿಕವಾಗಿ ನ್ಯಾಯ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಭಾರತ್ ಜೋಡೊಗೆ ಠಕ್ಕರ್ ಕೊಡಲು ಈ ಕೆಲಸ ಮಾಡಿಲ್ಲ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿರುವ ನಳೀನ್ ಕುಮಾರ್ ಕಟೀಲು, ಈ ಹಿಂದೆ ಕಮಿಟಿ ಮಾಡಿ ಮುಚ್ಚಿ ಹಾಕಲಿಕ್ಕೆ ಸಿದ್ದರಾಮಯ್ಯ ನೋಡಿದ್ದರು.ನಾವು ಅಧ್ಯಯನ ಮಾಡಿ ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ.
PublicNext
08/10/2022 05:37 pm