ದಾವಣಗೆರೆ: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಎಂಸಿಸಿ ಬಿ ಬ್ಲಾಕ್‌ನ ಈಜುಕೊಳ ಮುಂಭಾಗದಲ್ಲಿ ಪೌರ ಕಾರ್ಮಿಕರಿಗೆ ಉಡುಗೊರೆ ನೀಡಲಾಯಿತು. ನಿತ್ಯವೂ ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಿಗೆ ಗೌರವವನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ದಾವಣಗೆರೆ ನಗರ ಶುಚಿಯಾಗಿರಲು ಪೌರ ಕಾರ್ಮಿಕರೇ ಕಾರಣ. ಅವರ ಸೇನೆ ಅನನ್ಯ. ಹಬ್ಬದ ಅಂಗವಾಗಿ ಅವರಿಗೆ ಉಡುಗೊರೆ ನೀಡುವ ಮೂಲಕ ಹಬ್ಬದ ಶುಭಾಶಯ ಕೋರಲಾಯಿತು ಎಂದರು.
ಎಂಸಿಸಿ ಬಿ ಬ್ಲಾಕ್‌ನಲ್ಲಿನ ಈಜುಕೊಳವು ಜನವರಿ ತಿಂಗಳಿನಲ್ಲಿ ಜನರ ಸೇವೆಗೆ ಸಮರ್ಪಿತವಾಗಲಿದೆ. ವಾರ್ಡ್ ನ ಹಿರಿಯರು, ನಾಗರಿಕರು ಈಜುಕೊಳ ಅಭಿವೃದ್ಧಿಪಡಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಹೋರಾಟದ ಫಲವಾಗಿ ಈಗ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
Kshetra Samachara
05/10/2022 04:35 pm