ದಾವಣಗೆರೆ : ಕಾಂಗ್ರೆಸ್ ಅಂದ್ರೇ ಕತ್ತರಿ ಇದ್ದಂತೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯಕ್ಕೆ ಉಗ್ರರ ಭಾಗ್ಯ ನೀಡಿದ್ದು, ಜವಾಹರಲಾಲ್ ನೆಹರು ಕಾಲದಿಂದ ದೇಶವನ್ನ ಛಿದ್ರ ಛಿದ್ರ ಮಾಡಲಾಗಿದೆ. ಅಲ್ಲದೇ, ಓಟಿಗಾಗಿ, ಸ್ವಾರ್ಥಕ್ಕಾಗಿ ಕಾಂಗ್ರೆಸ್ ನವರು ದೇಶವನ್ನ ಬಳಸಿಕೊಂಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.
ದಾವಣಗೆರೆಯಲ್ಲಿ ಭಾರತ್ ಜೋಡೋ ಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ರಾಹುಲ್ ಗಾಂಧಿ ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಇದು ಭಾರತ್ ಜೋಡೋ ಅಲ್ಲ, ಭಾರತ್ ಚೋಡೊ ಯಾತ್ರೆ ಎಂದು ವ್ಯಂಗ್ಯ ಮಾಡಿದ್ದಾರೆ. ನರೇಂದ್ರ ಮೋದಿ ದೈತ್ಯ ಬಂಡೆ ಇದ್ದಂತೆ. ಬಂಡೆ ಮುಂದೆ ರಾಹುಲ್ ಗಾಂಧಿ ಮಣ್ಣಿನ ಉಂಡೆ ಸಮಾನ. ಅ ಬಂಡೆಯ ವಿರುದ್ದ ಹೋಗ್ತಾರಲ್ಲ ಇದು ಚೈಲ್ಡಿಶ್ ಮೆಂಟಾಲಿಟಿ ತೋರಿಸುತ್ತದೆ. ಮೇಲಾಗಿ ರಾಹುಲ್ ಗಾಂಧಿ ಒಬ್ಬ ಫನ್ನಿಬಾಯ್ ಎಂದು ರೇಣುಕಾಚಾರ್ಯ ರಾಹುಲ್ ಗಾಂಧಿಯನ್ನ ಲೇವಡಿ ಮಾಡಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಜನರು ಗೋ ಬ್ಯಾಕ್ ಎಂದು ಜನ ಇವರನ್ನ ಓಡಿಸುತ್ತಿದ್ದಾರೆ. ರಾಹುಲ್ ಗಾಂಧಿಗೆ ರಾಜಕೀಯ ಪ್ರಬುದ್ದತೆ ಇಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಈಗ ಕಾಂಗ್ರೆಸ್ ನ ರಾಷ್ಟ್ರೀಯ ಅದ್ಯಕ್ಷರಾಗಲು ಯಾರು ಸಿದ್ದರಿಲ್ಲ. ರಾಹುಲ್ ಗಾಂಧಿ ಏನಾದ್ರು ಅದ್ಯಕ್ಷರಾದ್ರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ.
ಅದಕ್ಕಾಗಿ ಈಗ ಮಲ್ಲಿಕಾರ್ಜುನ್ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನನಗೆ ಖರ್ಗೆಯವರ ಮೇಲೆ ಅಪಾರವಾಗ ಗೌರವ ಇದೆ. ಈ ವಿಚಾರದಲ್ಲಿ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
PublicNext
01/10/2022 05:12 pm