ಬೇಡರ ಜಂಗಮ ಜಾತಿ ಹೆಸರಿನಲ್ಲಿ ಎಸ್ಸಿ ಸರ್ಟಿಫಿಕೇಟ್ ಪಡೆದಿದ್ದೇನೆ ಎಂದು ಹೇಳಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯರ ಸಹೋದರ ಎಂ. ಪಿ. ದಾರಕಸ್ವಾಮಿ ವಿರುದ್ಧ ದಲಿತಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು. ಸುಮಾರು ಒಂದು ಗಂಟೆ ಕಾಲ ರೇಣುಕಾಚಾರ್ಯ ಸಹೋದರನಿಗೆ ದಿಗ್ಬಂಧನ ಹಾಕಲಾಗಿತ್ತು.
ಪತ್ರಿಕಾಗೋಷ್ಠಿ ನಡೆಸಲು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಹೋದರ ಎಂ. ಪಿ. ದಾರಕೇಶ್ವರಯ್ಯ ಬಂದಿದ್ದರು. ಗೋಷ್ಠಿಯಲ್ಲಿ ಬೇಡರ ಜಂಗಮ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದನ್ನು ಸಮರ್ಥಿಸಿಕೊಂಡರು. ಬಳಿಕ ಈ ಸುದ್ದಿ ತಿಳಿಯುತ್ತಿದ್ದಂತೆ ದಲಿತ ಪರ ಸಂಘಟನೆಯ ಮುಖಂಡರು, ಸದಸ್ಯರು ಜಿಲ್ಲಾ ವರದಿಗಾರರ ಕೂಟದ ಬಳಿ ಜಮಾಯಿಸಿದರು. ಇಲ್ಲೇ ಪೊಲೀಸ್ ಜೀಪ್ ಇದ್ದರೂ, ಪೊಲೀಸರು ಇದ್ದರೂ ದಲಿತ ಮುಖಂಡರು ಆಕ್ರೋಶ ಹೆಚ್ಚಾಯಿತು.
ನಮ್ಮ ಸೌಲಭ್ಯಗಳನ್ನು ಆರ್ಥಿಕವಾಗಿ, ರಾಜಕೀಯವಾಗಿ ಬಲಿಷ್ಠವಾಗಿದ್ದರೂ ರೇಣುಕಾಚಾರ್ಯ ಹಾಗೂ ಅವರ ಸಹೋದರ ಪಡೆಯುವ ಮೂಲಕ ನಮಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಜೊತೆ ಬಹಿರಂಗ ಚರ್ಚೆಗೆ ಬರಲಿ. ಶೌಚಾಲಯ ತೊಳೆಯುವುದೂ ಸೇರಿದಂತೆ ನಾವು ಮಾಡುವ ಕೆಲಸ ಮಾಡಿದ್ದೀರಾ. ಸೌಲಭ್ಯಗಳನ್ನು ಪಡೆಯಲು ನೀವು ಅರ್ಹರಿದ್ದೀರಾ ಎಂದು ಏರು ದನಿಯಲ್ಲಿಯೇ ದಾರಕೇಶ್ವರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
Kshetra Samachara
28/03/2022 04:36 pm