ದಾವಣಗೆರೆ: ತೂಗು ಸೇತುವೆ ಒಡೆದಿರುವುದರಿಂದ ಲಕ್ಷಾಂತರ ರೈತರ ಬೆಳೆ ಹಾಳಾಗಿದ್ದು, ಒಂದು ಸಾವಿರ ಕೋಟಿ ನಷ್ಟವಾಗಿದೆ. ನೀರಾವರಿ ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ನಾಗೇಶ್ವರ ರಾವ್ ಎಚ್ಚರಿಸಿದರು.
ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಗೊಬ್ಬರ, ನಾಟಿ, ಕಳೆ ಎಲ್ಲಾ ಕೆಲಸಗಳು ಮುಗಿದಿದ್ದು, ನೆಮ್ಮದಿಯಾಗಿ ಇರುವ ವೇಳೆ ತೂಗು ಸೇತುವೆ ಒಡೆದು ನಷ್ಟವಾಗಿದೆ. ಕಾಲುವೆ ಒಡೆಯಲು ಎಂಜಿನಿಯರ್‌ಗಳು ಕಾರಣರಾಗಿದ್ದಾರೆ. ಎಂಜಿನಿಯರ್‌ಗಳು ಪಂಪ್‌ಸೆಟ್‌ಗಳಲ್ಲಿ ಕಲೆಕ್ಷನ್ ಮಾಡಲು ಹೊರಟಿದ್ದಾರೆ. 2 ರಿಂದ 3 ಸಾವಿರ ಕ್ಯುಸೆಕ್ ನೀರು ಬಿಡುತ್ತಿರುವುದರಿಂದ ಸೇತುವೆ ಒಡೆದಿದೆ. ನೀರಾವರಿ ಸಚಿವರು ಇಲ್ಲೇ ಇದ್ದು, ವಾರದೊಳಗೆ ಸಮಸ್ಯೆ ಬಗೆಹರಿಸಬೇಕು. ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಸ್ಥಳದಲ್ಲೇ ಇದ್ದು, ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ ಅವರು ಬಂದು ಹಾಗೆಯೇ ಹೋದರು. ನೀರಾವರಿ ಸಚಿವರು, ಇಲಾಖೆಯ ಎಂ.ಡಿ. ಸಂಬಂಧಪಟ್ಟ ಎಂಜಿಯರ್‌ಗಳು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕು. ಸಮಸ್ಯೆ ಬಗೆಹರಿಸಿದರೆ ಒಳ್ಳೆಯದು. ಇಲ್ಲದಿದ್ದರೆ ವಿಷ ಕುಡಿಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.
PublicNext
03/10/2022 07:50 pm