ಹೊನ್ನಾಳಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಾಜಿ ಶಾಸಕ ಡಿ. ಬಿ. ಶಾಂತನಗೌಡ ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ ಘಟನೆ ನಡೆದಿದೆ.
ಮಳೆ ಹಾನಿ ಪರಿಹಾರ ನೀಡುವ ಕುರಿತಂತೆ ತಹಶೀಲ್ದಾರ್ ರಶ್ಮಿ ಕಚೇರಿಯಲ್ಲಿ ಚರ್ಚೆ ನಡೆಸಲಾಗುತಿತ್ತು. ಈ ವೇಳೆ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರೂ ಸಹ ಹಾಜರಿದ್ದರು. ಈ ವೇಳೆ ಸಿಟ್ಟಿಗೆದ್ದ ಶಾಂತನಗೌಡ, ಸರಿಯಾಗಿ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ. ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ನೀವೇನೂ ಮಾಡುತ್ತಿದ್ದೀರಾ ನಮ್ಮನ್ನು ಕೇಳುತ್ತಿದ್ದಾರೆ ಎಂದರು. ಆಗ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಗರ್ಭಿಣಿಯಾಗಿರುವ ತಹಶೀಲ್ದಾರ್ ಎದುರು ಈ ರೀತಿ ಮಾತನಾಡಿದ್ದು ಖಂಡನೀಯ ಎಂದು ರೇಣುಕಾಚಾರ್ಯ ಹೇಳಿದರು. ಮಾಜಿ ಶಾಸಕ ಹಾಗೂ ತಹಶೀಲ್ದಾರ್ ನಡುವೆ ಮಾತಿನ ಚಕಮಕಿಯೂ ನಡೆಯಿತು. ಮಾಜಿ ಶಾಸಕರ ವರ್ತನೆಗೆ ವಿರೋಧವೂ ವ್ಯಕ್ತವಾಗುತ್ತಿದೆ.
PublicNext
16/09/2022 01:29 pm