ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ದೇವರಬೆಳಕೆರೆ ಪಿಕ್‌ಅಪ್ ಡ್ಯಾಂ ಗೇಟ್ ಓಪನ್‌ ಮಾಡುವಂತೆ ಆಗ್ರಹ

ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕ್‌ಅಪ್ ಡ್ಯಾಂ ಗೇಟ್ ರೈತರ ಬೆಳೆಗಳಿಗೆ ಕುತ್ತು ತಂದಿಟ್ಟಿವೆ. ಡ್ಯಾಂನ ಗೇಟ್ ಗಳಿಗೆ ಸಸ್ಯರಾಶಿ ಅಡ್ಡ ಕೂತಿರುವ ಬೆನ್ನಲ್ಲೇ ನೀರು ಸರಗಾವಾಗಿ ಹರಿಯದ ಪರಿಣಾಮ ಡ್ಯಾಂ ಹಿನ್ನೀರಿನಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಈ ಸಮಸ್ಯೆ ಸಾಕಷ್ಟು ದಿನಗಳಿಂದ ತಲೆದೂರಿದ್ದು, ಸಣ್ಣ ನೀರವಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ, ಇದರಿಂದ ಡ್ಯಾಂನ ಗೇಟ್ ಗಳಿಗೆ ಅಡ್ಡಲಾಗಿ ಅನವಶ್ಯಕವಾಗಿ ಹಾಕಿರುವ ಸರಳುಗಳನ್ನು ತೆರುವು ಮಾಡುವಂತೆ ಆಗ್ರಹಿಸಿ ರೈತರಿಂದ ಹೋರಾಟ ಆರಂಭವಾಗಿದೆ. ನೀರು‌ ಸರಾಗವಾಗಿ ಹರಿದು ಹೋಗುವಂತೆ ಕ್ರಮಕ್ಕೆ ರೈತರು ಆಗ್ರಹಿಸಿದರು.

ಡ್ಯಾಂನ ಗೇಟ್ ನಲ್ಲಿ ಅಪಾರ ಪ್ರಮಾಣದ ಸಸ್ಯ ಸೇರಿಕೊಂಡು ತೊಂದರೆಯಾಗುತ್ತಿದ್ದರಿಂದ ಈ ಕೆರೆಯ ಹಿನ್ನೀರಿನಲ್ಲಿ ಬರುವ ಬಲ್ಲೂರು, ರೆಡ್ಡಿಹಳ್ಳಿ, ಸಂಕ್ಲಿಪುರ ಸೇರಿದಂತೆ ಎಳು ಗ್ರಾಮಗಳ ವ್ಯಾಪ್ತಿಯ ಜಮೀನಿನಲ್ಲಿ ನೀರು ಸಂಗ್ರಹವಾಗಿದೆ. ಭತ್ತ ಸೇರಿದಂತೆ ಹಲವಾರು ಬೆಳೆಗಳು ಜಲ ಸಮಾಧಿಯಾಗಿವೆ. ತಕ್ಷಣಕ್ಕೆ ಡ್ಯಾಂನ ಗೇಟ್ ಓಪನ್ ಮಾಡಿ ನೀರು ಹರಿದುಹೋಗಲು ಅನುಕೂಲ ಮಾಡುವಂತೆ ರೈತರ ಆಗ್ರಹಿಸಿದ್ದಾರೆ.

Edited By : Nagesh Gaonkar
PublicNext

PublicNext

29/09/2022 05:11 pm

Cinque Terre

24.76 K

Cinque Terre

0