ದಾವಣಗೆರೆ: ದಾವಣಗೆರೆಯ ಭಾಷಾ ನಗರ ಮುಖ್ಯ ರಸ್ತೆಯ ಮಿಲ್ಲತ್ ಶಾಲೆ ಬಳಿ ಇರುವ ಎಸ್ಡಿಪಿಐ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ರು. ಈ ದಾಳಿ ಎಸಿ ದುರ್ಗಾಶ್ರೀ ನೇತೃತ್ವದಲ್ಲಿ ನಡೆದಿದ್ದು, ಈ ಹಿಂದೆ ಪಿಎಫ್ ಐ ಕಚೇರಿಯಾಗಿದ್ದ ಎಸ್ ಡಿಪಿಐ ಕಚೇರಿಯಲ್ಲಿ ಪಿಎಫ್ಐ ಕಾರ್ಯ ಚಟುವಟಿಕೆ ಮಾಡುತ್ತಿದ್ದ ಹಿನ್ನೆಲೆ ದಾಳಿ ನಡೆಸಲಾಗಿದೆ. ಇಡೀ ಕಚೇರಿ ತಪಾಸಣೆ ಮಾಡಿದ ಪೋಲಿಸರು ಬಳಿಕ ಸೀಲ್ ಮಾಡಿದ್ದಾರೆ.
ಇನ್ನು ಎಸ್ಡಿಪಿಐ ಕಾರ್ಯಕರ್ತ ನಗರ ಸಮಿತಿ ಸದಸ್ಯ ಮೆಹಬೂಬ್ ಸುಬಾನಿ ಮನೆ ತಪಾಸಣೆ ಕೂಡ ಮಾಡಲಾಗಿದ್ದು, ಆತನ ಮನೆಯಲ್ಲಿ ಪಿಎಫ್ಐ ಗೆ ಸಂಬಂಧಪಟ್ಟ ಕೆಲ ದಾಖಲೆಗಳು ಪತ್ತೆಯಾಗಿವೆ. ಎಸ್ ಡಿಪಿಐ ನ ಕಚೇರಿಯನ್ನು ಸೀಲ್ ಮಾಡುವ ಮೂಲಕ ಅದರ ಕೀಯನ್ನು ಎಸಿ ದುರ್ಗಾಶ್ರೀಗೆ ಪೊಲೀಸರು ಹಸ್ತಾಂತರ ಮಾಡಿದರು.
ಇನ್ನು ದಾವಣಗೆರೆಯಲ್ಲಿ ಮತ್ತೆ ಪಿಎಫ್ಐ ಹಾಗೂ ಎಸ್ ಡಿಪಿಐ ಮುಖಂಡರ ಮನೆ ಮೇಲೆ ದಾಳಿ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಎಸ್ ಡಿಪಿಐ ಮುಖಂಡರಾದ ಕಾಳಿದಾಸ ನಗರದ ಫಯಾಜ್ ಅಹ್ಮದ್, ಕೇಶವ ನಗರದ ಸೈಯದ್ ಅಶ್ಫಾಕ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
PublicNext
30/09/2022 06:37 pm