ದಾವಣಗೆರೆ : ಒಂದೇ ದಿನಕ್ಕೆ ಭರ್ತಿಯಾದ ಕೆರೆ. ಮಳೆ ಆರ್ಭಟಕ್ಕೆ 3 ತಿಂಗಳಲ್ಲಿ 4 ನೇ ಬಾರಿ ಕೋಡಿ ಬಿದ್ದ ಕೆರೆ. ಜಲಾವೃತಗೂಂಡ ತೋಟಗಳು. ಭರ್ತಿಯಾಗಿ ಹರಿಯುತ್ತಿರುವ ಹೆದ್ದಾರಿ ಪಕ್ಕದ ಚರಂಡಿಗಳು. ಇದು ಬೆಣ್ಣೆನಗರಿ ದಾವಣಗೆರೆಯಲ್ಲಿ ಮಳೆ ತಂದ ಅವಾಂತರ.
ಹೀಗೆ ಜಲಾವೃತಗೊಂಡ ಅಡಿಕೆ ತೋಟಗಳು. ಭರ್ತಿಯಾಗಿ ಹರಿಯುತ್ತಿರುವ ಹೆದ್ದಾರಿ ಪಕ್ಕದ ಚರಂಡಿಗಳು. ಕೋಡಿಬಿದ್ದು ಹರಿಯುತ್ತಿರುವ ಕೆರೆ. ಕಳೆದ 2 ದಿನಗಳಿಂದಲೂ ದಾವಣಗೆರೆಯಲ್ಲಿ ಮಳೆ ಆರ್ಭಟ ಜೋರಾಗಿದೆ. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ದಾವಣಗೆರೆ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ.
ಮಳೆ ಆರ್ಭಟಕ್ಕೆ ಒಂದೆ ದಿನದಲ್ಲಿ ಹೆಬ್ಬಾಳು ಕೆರೆ ಭರ್ತಿಯಾಗಿದೆ. ವರ್ಷಧಾರೆಗೆ 4 ನೇ ಭಾರಿ ಕೋಡಿಬಿದ್ದು ಹರಿಯುತ್ತಿದೆ. ಇನ್ನು ಗ್ರಾಮದ ಮಠದ ಜಮೀನು ಅಡಿಕೆ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ಕಳೆ ನಾಲ್ಕೈದು ತಿಂಗಳಿಂದಲೂ ಮಳೆ ಆರ್ಭಟಕ್ಕೆ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿ ಕೂಡ ಆಗಿದೆ. ಕಳೆದ ಒಂದು ವಾರದಿಂದ ವಿಶ್ರಾಂತಿ ನೀಡಿದ್ದ ಮಳೆ ಮತ್ತೆ ಆರ್ಭಟಿಸಿದ್ದು ಸಾಕಷ್ಟು ನಷ್ಟಕ್ಕೆ ಕಾರಣವಾಗಿದೆ.
ಬೆಣ್ಣೆನಗರಿಯಲ್ಲಿ ಮಳೆ ಆರ್ಭಟಕ್ಕೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತತೆಯಿಂದ ಕೂಡಿದೆ. ಇನ್ನೂ ಬೆಳೆಗಳು ಹಾನಿಯಾಗಿದ್ದು ರೈತರಿಗೆ ಸಾಕಷ್ಟು ನಷ್ಟವಾಗಿದೆ. ಹಾನಿಯಾದ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಬೀಡಬೇಕೆಂಬುದು ಅನ್ನದಾತರ ಆಗ್ರಹ.
PublicNext
02/10/2022 02:10 pm