ದಾವಣಗೆರೆ: ತಾಲೂಕಿನ ನಲ್ಕುಂದ ಗ್ರಾಮದ ಬಳಿ ಭದ್ರಾ ನಾಲಾ ತಡೆಗೋಡೆ ಕೊಚ್ಚಿ ಹೋದ ಪರಿಣಾಮ ಭಾರೀ ಪ್ರಮಾಣದಲ್ಲಿ ನಾಲೆಯ ನೀರು ಹೊಲ ಗದ್ದೆಗಳಿಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಅಡಕೆ, ಬಾಳೆ ತೋಟ ಜಲಾವೃತವಾಗಿವೆ. ರಸ್ತೆ ಸಂಪರ್ಕ ಕಡಿತಗೊಂಡಿದೆ.
ದಾವಣಗೆರೆ ತಾಲೂಕಿನ ಶ್ಯಾಗಲೆ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಶ್ಯಾಗಲೆ, ಲೋಕಿಕೆರೆ, ಮತ್ತಿ, ಹೂವಿನಮಡು ಗ್ರಾಮಗಳಿಗೆ ಸಂಪರ್ಕ ವೇ ಇಲ್ಲವಾಗಿದೆ. ಜಿಲ್ಲಾ ಕೇಂದ್ರ ದಾವಣಗೆರೆಯ ಹಳೇ ಚಿಕ್ಕನಹಳ್ಳಿ ಬಡಾವಣೆಗೆ ಹಳ್ಳದ ಮನೆಗಳಿಗೆ ನುಗ್ಗಿದೆ. ಇಡೀ ಬಡಾವಣೆ ಜಲಾವೃತವಾಗಿದೆ.
ಜನರು ರಾತ್ರಿಯಿಡೀ ತೊಂದರೆ ಅನುಭವಿಸುವಂತಾಯಿತು. ಈವರೆಗೆ ಅಧಿಕಾರಿಗಳು ಬಂದು ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
PublicNext
02/10/2022 04:47 pm