ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ.!

ದಾವಣಗೆರೆ: ಕಾಲೇಜು ಮತ್ತು ಹೈಸ್ಕೂಲ್‌ಗೆ ಹೋಗುವ ನೂರಾರು ವಿದ್ಯಾರ್ಥಿಗಳು, ಬಸ್ ಹತ್ತಿ ಸರ್ಕಸ್ ಮಾಡ್ತಿರೋ ಹುಡುಗರು, ಜೀವ ಕೈನಲ್ಲಿ ಹಿಡಿದು ಬಾಗಿಲಿಗೆ ಜೋತುಬಿದ್ದು ಹೋಗ್ತಾ ಇರೋ ವಿದ್ಯಾರ್ಥಿ, ವಿದ್ಯಾರ್ಥಿನಿಯರು.

ಇದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಹಳ್ಳಿಗಳ ವಿದ್ಯಾರ್ಥಿಗಳ ಪಾಡು. ಪ್ರತಿದಿನ ಸಾಸ್ವೆಹಳ್ಳಿಯಿಂದ ಆನವೇರಿ, ಹೊಳಲೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗುವ ಬಸ್‌ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾರೆ. ಪ್ರತಿದಿನ ಬಸ್‌ನಲ್ಲಿ ನಿಲ್ಲೋದಕ್ಕೂ ಸಹ ಜಾಗ ಇಲ್ಲದೆ ಪರದಾಡುವ ಸ್ಥಿತಿ ಈ ವಿದ್ಯಾರ್ಥಿಗಳದ್ದು, ವಿದ್ಯಾರ್ಥಿನಿಯರು ಬಸ್ ಬಾಗಿಲಿನಲ್ಲಿ ನೇತಾಡುತ್ತಾ ಹೋಗುವ ದೃಶ್ಯ ನಿಜಕ್ಕೂ ನಾಗರಿಕ ಸಮಾಜ ಅಲ್ಲದೆ ರಾಜ್ಯ ಸರ್ಕಾರವು ತಲೆತಗ್ಗಿಸುವಂತಿದೆ. ಬಸ್ ಫುಲ್ ಆಗುವ ಪರಿಣಾಮ ಸಾಕಷ್ಟು ಅನಾಹುತ ಸಹ ಸಂಭವಿಸಿವೆ.

ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಬಸ್ ಹೊರಟ ಸಮಯದಲ್ಲೇ ಆಯತಪ್ಪಿ ವಿದ್ಯಾರ್ಥಿಗಳು ಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.

Edited By : Shivu K
PublicNext

PublicNext

31/12/2024 07:55 pm

Cinque Terre

69.64 K

Cinque Terre

0