ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯ ನ್ಯಾಯಬೆಲೆ ಪಡಿತರ ಅಕ್ಕಿಯನ್ನ ಬೇರೆಡೆ ಸಾಗಿಸುತ್ತಿದ್ದ ಲಾರಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, 53 ಚೀಲ ಪಡಿತರ ಅಕ್ಕಿ ಹಾಗೂ 200 ಚೀಲ ಮೆಕ್ಕೆಜೋಳದ ಚೀಲವನ್ನ ವಶಪಡಿಸಿಕೊಂಡಿದ್ದಾರೆ.
ಅಲ್ಲದೇ ಓರ್ವ ಆರೋಪಿಯನ್ನ ವಶಕ್ಕೆ ಪಡೆದಿದ್ದು, ಇನ್ನು ಆತನ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 70 ಚೀಲ ಅಕ್ಕಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ್ಯಾಯಬೆಲೆ ಅಂಗಡಿಯಿಂದ ಅಕ್ಕಿಯನ್ನ ಖರೀದಿ ಮಾಡಿ ಮೆಕ್ಕೆಜೋಳದ ಲಾರಿಯಲ್ಲಿ ಬೇರೆಡೆ ಸಾಗಾಟ ಮಾಡಲಾಗುತ್ತಿತ್ತು.
ಈ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಹೊನ್ನಾಳಿ ಸಿಪಿಐ ಸಿದ್ದೇಗೌಡ ಹಾಗೂ ನ್ಯಾಮತಿ ಪಿಎಸ್ ಐ ರಮೇಶ್ ದಾಳಿ ಮಾಡಿ ಅಕ್ಕಿ ಹಾಗೂ ಮೆಕ್ಕೆಜೋಳವನ್ನ ಜಪ್ತಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
PublicNext
08/10/2022 05:56 pm