ದಾವಣಗೆರೆ : ಕೇರ್ ಟೇಕರ್ ಕೆಲಸಕ್ಕೆ ಸೇರಿಕೊಂಡ ಮಹಿಳೆ ಮನೆಯಲ್ಲಿದ್ದ ಹಣ, ಆಭರಣಗಳೊಂದಿಗೆ ಪರಾರಿಯಾಗಿದ್ದ ಘಟನೆ ಬೆಂಗಳೂರಲ್ಲಿ ನಡೆದಿದ್ದು. ಈ ಸಂಬಂಧ ಚನ್ನಗಿರಿ ತಾಲ್ಲೂಕು ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆಯಿಂದ 5 ಲಕ್ಷ ರೂ. ನಗದೂ ಸೇರಿದಂತೆ 15 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲ್ಲೂಕು ಗುಳ್ಳೆಹಳ್ಳಿ ಗ್ರಾಮದ ಉಮಾದೇವಿ (43)ವರ್ಷದ ಬಂಧಿತ ಮಹಿಳೆ. ಅಪರ್ಣ ಎಂಬುವರ ಮನೆಯಲ್ಲಿ ಅವರ ತಂದೆ ಗಂಗಣ್ಣ ಎಂಬುವರನ್ನು ನೋಡಿಕೊಳ್ಳಲು ಕೇರ್ ಟೇಕರ್ ಕೆಲಸಕ್ಕೆ ಉಮಾದೇವಿಯನ್ನು ನೇಮಕ ಮಾಡಿಕೊಂಡಿದ್ದರು. ಸೆ.21ರಂದು ಉಮಾದೇವಿ ಮನೆಯಲ್ಲಿದ್ದ ನಗದು, ಚಿನ್ನದ ಒಡವೆಗಳನ್ನು ಹಾಗೂ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದಳು.
ಈ ಬಗ್ಗೆ ಅಪರ್ಣ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡ ಪೊಲೀಸರು ಆರೋಪಿತೆ ಬಗ್ಗೆ ಮಾಹಿತಿ ಕಲೆ ಹಾಕಿ ಆಕೆಯನ್ನು ಪತ್ತೆಹಚ್ಚಿ ಬಂಧಿಸಿ 5 ಲಕ್ಷ ರೂ.ನಗದು, 230 ಗ್ರಾಂ ಚಿನ್ನದ ಒಡವೆಗಳು, 750 ಗ್ರಾಂ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
Kshetra Samachara
30/09/2022 06:01 pm