ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಎಟಿಎಂಗೆ ಕನ್ನ ಹಾಕಿದ್ದ ಆರೋಪಿ ಬಂಧನ

ದಾವಣಗೆರೆ: ಜಗಳೂರು ಪಟ್ಟಣದ ಆಕ್ಸಿಸ್ ಬ್ಯಾಂಕ್‌ನ ಎ.ಟಿ.ಎಂನಲ್ಲಿ ಹಣ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಗಳೂರಿನ ತಮಲೇಹಳ್ಳಿಯಲ್ಲಿ ವಾಸವಾಗಿದ್ದ ಗುರಪ್ಪ ಅಲಿಯಾಸ್ ಗುರುಸ್ವಾಮಿ (40 ವರ್ಷ) ಬಂಧಿತ ಆರೋಪಿಯಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಹಾರೇಕೋಲು ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ ಗ್ರಾಮಾಂತರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಸತ್ಯನಾರಾಯಣಸ್ವಾಮಿ ನೇತೃತ್ವದಲ್ಲಿ ಪಿ.ಎಸ್.ಐ. ಮಹೇಶ್, ಲಕ್ಷ್ಮಣ ಹೊಸಪೇಟೆ , ಪಿಎಸ್‌ಐ ಮಂಜುನಾಥ ಕಲ್ಲದೇವರ, ಸಿ.ಎನ್ . ಬಸವರಾಜಪ್ಪ , ಪ್ರೊಬೇಷನರಿ ಪಿ.ಎಸ್.ಐ ಶಿವಾನಂದ ಹಾಗೂ ಸಿಬ್ಬಂದಿ ಮಾರಪ್ಪ , ಆನಂದ , ನಾಗರಾಜ್ , ರಮೇಶ್ , ಪಂಪನಾಯ್ಕ , ನಾಗರಾಜ , ಅಕ್ತರ್ , ನಾಗರಾಜ ಇವರನ್ನೊಳಗೊಂಡ ತಂಡವು ಪ್ರಕರಣದ ಆರೋಪಿಯನ್ನು ಘಟನೆ ನಡೆದ 12 ಗಂಟೆಯೊಳಗೆ ಬಂಧಿಸಿದೆ.

Edited By : Shivu K
PublicNext

PublicNext

20/09/2022 12:17 pm

Cinque Terre

21.93 K

Cinque Terre

0