ದಾವಣಗೆರೆ: ಓದುವುದೇ ಉದ್ಯೋಗ ಪಡೆಯಲು ಮಾತ್ರ ಎನ್ನುವ ಮಾನಸಿಕತೆ ನಮ್ಮಲ್ಲಿ ಬೆಳೆದಿದೆ. ಈ ಮನೋಭಾವ ಬದಲಾಗಿ ನಾವು ಉದ್ದಿಮೆದಾರರಾಗಬೇಕು ಎನ್ನುವ ಮನೋಭಾವ ಬರಬೇಕಿದೆ ಎಂದು ಮಾಜಿ ಮೇಯರ್ ಎಸ್.ಟಿ.ವೀರೇಶ್ ಕರೆ ನೀಡಿದರು.
ನಗರದ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ದೇಶಪಾಂಡೆ ಫೌಂಡೇಷನ್ ವತಿಯಿಂದ ಅಕ್ಟೋಬರ್ 8ರಿಂದ 10ರವರೆಗೆ ಆಯೋಜಿಸಲಾಗಿದ್ದ ಕರಕುಶಲ ವಸ್ತುಗಳ ಮಾರಾಟ ಮೇಳ ಉದ್ಯಮಿ ಸಂತೆ ಉದ್ಘಾಟಿಸಿ ಮಾತನಾಡಿದ ಅವರು,ನಾವು ಸ್ವತಹ ಉದ್ದಿಮೆದಾರರು ಅಗಬೇಕೆನ್ನುವ ಮನೋಭಾವ ನಾವು ಉತ್ತರ ಭಾರತೀಯರಲ್ಲಿ ಇದೆ. ಆದರೆ ದಕ್ಷಿಣ ಭಾರತೀಯರಲ್ಲಿ ಇಲ್ಲ. ಅದು ನಮ್ಮ ಕರ್ನಾಟಕದಲ್ಲೂಇದೆ. ಅದರಲ್ಲೂ ಕರ್ನಾಟಕದ ಜನತೆ ಕೇವಲ ಕೆಲಸಗಳಿಗೆ ಜೋತು ಬೀಳದೆ ನವೋದ್ಯಮಗಳನ್ನು ಆರಂಭಿಸುವ ಮೂಲಕ ತಾವು ಉದ್ದಿಮೆದಾರರಾಗಿ ಸ್ವಾವಲಂಬನೆ ಸಾಧಿಸುವ ಮೂಲಕ ಇತರರಿಗೆ ಉದ್ಯೋಗ ನೀಡಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿವರ್ಷ 1.20ಕೋಟಿ ಜನ ಪದವಿ ಮುಗಿಸಿಕೊಂಡು ಹೊರಗೆ ಬಂದರೆ 10ಲಕ್ಷ ಜನಕ್ಕೆ ಕೆಲಸ ಸಿಗುತ್ತದೆ. ಇನ್ನುಳಿದವರು ಕೆಲಸಕ್ಕಾಗಿ ಅಲೆದಾಡಿ ಸುಮ್ಮನಾಗಿ ನಿರುದ್ಯೋಗಿಗಳಾಗುತ್ತಾರೆ. ಕಾರಣ ಯುವಕರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಾವು ಕೆಲಸಗಾರರಲ್ಲ. ಉದ್ದಿಮೆದಾರರು ಎನ್ನುವ ರೀತಿಯಲ್ಲಿ ಸಾಗಬೇಕು ಎಂದು ತಿಳಿಸಿದರು.
Kshetra Samachara
07/10/2022 07:37 pm