ಮೈಸೂರು- ಮೈಸೂರಿನಲ್ಲಿನಾಡ ಹಬ್ಬ ಮೈಸೂರು ದಸರಾ ಕಳೆಗಟ್ಟಿದೆ. ದಸರಾ ಹಬ್ಬ ಸಮೀಪಿಸುತ್ತಿದ್ದಂತೆ ಮೈಸೂರು ಅರಮನೆ ದೀಪಾಲಂಕಾರದಿಂದ ಜಗಜಗಮಿಸಲು ಸಜ್ಜಾಗಿದೆ.
ಅರಮನೆಗೆ ಬಲ್ಬ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಪ್ರತಿ ವರ್ಷ ದಸರಾ ವೇಳೆ ನೂತನ ವಿದ್ಯುತ್ ಬಲ್ಬ್ ಸಿಬ್ಬಂದಿ ಅಳವಡಿಸುತ್ತಾರೆ. ಬೆಸ್ಕಾಂ ಸಿಬ್ಬಂದಿಯಿಂದ ಅರಮನೆ ಹಾಗೂ ಕಮಾನುಗಳಿಗೂ ಬಲ್ಬ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಕ್ರೇನ್ ಮೂಲಕ ಸಿಬ್ಬಂದಿ ಬಲ್ಬ್ ಅಳವಡಿಸುತ್ತಿದ್ದಾರೆ. ದಸರಾ ವೇಳೆ ಪ್ರಮುಖ ಆಕರ್ಷಣ ಕೇಂದ್ರಬಿಂದುವಾಗಿ ಅರಮನೆ ದೀಪಾಲಂಕಾರದಿಂದ ಕಂಗೊಳಿಸಲಿದೆ.
ದೀಪಾಲಂಕಾರ ವೀಕ್ಷಿಸಲು ದೇಶ, ವಿದೇಶಗಳಿಂದಲೂ ಪ್ರವಾಸಿಗರು ಆಗಮುಸಲ್ಲಿದ್ದಾರೆ. ಹೀಗಾಗಿ ಬಲ್ಬ್ ಅಳವಡಿಸುವ ಕಾರ್ಯ ಭರದಿಂದ ಸಾಗಲಿದೆ.
PublicNext
08/09/2022 02:08 pm