ವರದಿ : ಸಂತೋಷ ಬಡಕಂಬಿ
ಅಥಣಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆ ಅಥಣಿಯಲ್ಲಿ ಇಂದು ತಾಲೂಕಾಡಳಿತದಿಂದ ಹಮ್ಮಿಕೊಂಡ ಮೆರವಣೆಗೆ ನೋಡುಗರ ಕಣ್ಮನ ಸೆಳೆದು ತಾಲೂಕಾಡಳಿತವನ್ನು ಶ್ಲಾಘಿಸುವಂತಾಗಿತ್ತು.
ಬೆಳಿಗ್ಗೆ ಶಿವಾಜಿ ವೃತದಲ್ಲಿ ಆರಂಭವಾದ ಮೆರವಣಿಗೆಯಲ್ಲಿ ಆನೆ ಮೇಲಿನ ಅಂಬಾರಿಯಲ್ಲಿ ಭಾರತಾಂಬೆ ಕುಳಿತಿದ್ದಳು, ಕುದುರೆ ಮೇಲೆ ವೀರ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಶ ಧರಿಸಿದ ಮಕ್ಕಳು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಸವಿನೆನಪುಗಳನ್ನು ಭಿತ್ತರಿಸುವ ವಿವಿಧ ಸನ್ನಿವೇಶಗಳನ್ನು ಸೃಷ್ಟಿ ಮಾಡಲಾಗಿತ್ತು.
ನಾಡಿನ ವಿವಿಧ ಭಾಗಗಳಿಂದ ಡೊಳ್ಳುಕುಣಿತ, ಜಾಂಝ ಫಥಕ್, ಗೊಂಬೆ ಕುಣಿತ, ತಾಷೆ ಬಾಜಾ, ಹಲಗೆ ನಾದಮೇಳ ಸೇರಿದಂತೆ ಇತರೆ ಕಲಾತಂಡಗಳ ಕಲಾವಿದರು ಸಾಂಸ್ಕೃತಿಕ ವೈಭವವನ್ನು ಧರೆಗಿಳಿಸಿದ್ದರು. ಇವರೆಲ್ಲರ ಜೊತೆಗೆ ವಿವಿಧ ವೇಷಧರಿಸಿದ ಸಾವಿರಾರು ಸಂಖ್ಯೆಯ ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸಿದ್ದರು.
ಈ ಮೆರವಣಿಗೆಯಲ್ಲಿ ಶ್ರೀ ಶಿವಬಸವ ಮಹಾಸ್ವಾಮಿಗಳು, ಪ್ರಭು ಚನ್ನಬಸವ ಮಹಾಸ್ವಾಮಿಗಳು, ಮರುಳಶಂಕರ ಮಹಾಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಶಾಸಕ ಮಹೇಶ ಕುಮಠಳ್ಳಿ, ಅರವಿಂದರಾವ ದೇಶಪಾಂಡೆ, ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.
PublicNext
15/08/2022 10:32 pm