ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಸ್ತ ಪಬ್ಲಿಕ್ ನೆಕ್ಸ್ಟ್ ಓದುಗರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು : ಸುಂದರ ಕ್ಷಣದ ಫೋಟೋ ಕಳುಹಿಸಿ ಬಹುಮಾನ ಗೆಲ್ಲಿ

ಹುಬ್ಬಳ್ಳಿ : ಸಹೋದರ ಮತ್ತು ಸಹೋದರಿಯ ಪ್ರೀತಿಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮಿಸುವ ಸಹೋದರ, ಸಹೋದರಿಯರ ಸಂತೋಷದ ಕ್ಷಣವನ್ನು ಇಮ್ಮಡಿಗೊಳಿಸಲು ಈ ಬಾರಿ ಪಬ್ಲಿಕ್ ನೆಕ್ಸ್ಟ್ ನಿಮಗೊಂದು ವೇದಿಕೆ ಸೃಷ್ಟಿ ಮಾಡಿದೆ.

ಈ ಹಬ್ಬದಂದು ನೀವು ನಿಮ್ಮ ಸಹೋದರ, ಸಹೋದರಿಯರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ನಮ್ಮ ವಾಟ್ಸ್ ಅಪ್ ನಂಬರ್ +91 73496 19443ಗೆ ಕಳುಹಿಸಿ.. ನಿಮ್ಮ ಆ ಸುಂದರ ಫೋಟೋವನ್ನು ನಮ್ಮ ಮಾಧ್ಯಮದಲ್ಲಿ ಪ್ರಕಟಿಸಲಾಗುತ್ತದೆ.

ಇನ್ನು ಸುಂದರ ಮತ್ತು ವಿನೂತನವಾಗಿ ಈ ಹಬ್ಬ ಆಚರಿಸಿದ ಅದೃಷ್ಟಶಾಲಿ ಸಹೋದರ ಸಹೋದರಿ ಜೋಡಿಯನ್ನು ನಮ್ಮ ಮಾಧ್ಯಮದ ಮೂಲಕ ಪುರಸ್ಕರಿಸಲಾಗುವುದು. ಈ ಬಾರಿ ಇಂದು ಮತ್ತೆ ನಾಳೆ ಎರಡು ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಿದ್ದಾರೆ ಹಾಗಾಗಿ ಶುಕ್ರವಾರ ಅಂದ್ರೆ ಆ.12ರ ಸಂಜೆ 4 ಗಂಟೆವರೆಗೆ ಫೋಟೋ ಕಳುಹಿಸಬಹುದು. 4 ಗಂಟೆ ನಂತರ ಬಂದ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ.

ಸೂಚನೆ : ಈ ವರ್ಷದ ಹಬ್ಬದಂದೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

Edited By : Nirmala Aralikatti
PublicNext

PublicNext

11/08/2022 11:34 am

Cinque Terre

101.69 K

Cinque Terre

2