ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಹಬ್ಬ!

ವರದಿ- ಈರನಗೌಡ ಪಾಟೀಲ

ಹಾವೇರಿ : ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಮುಸ್ಲಿಮರಿಲ್ಲ, ಆದರೆ ಮಸೀದಿ ಇದೆ ಮುಸ್ಲಿಮರ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬವನ್ನ ಗ್ರಾಮದ ಹಿಂದೂ ಬಾಂಧವರು ಬಹಳ ಅದ್ದೂರಿಯಾಗಿ ಸಾಂಪ್ರದಾಯಕವಾಗಿ ಆಚರಣೆ ಮಾಡುತ್ತಾರೆ.

ಇಲ್ಲಿ ಶಾಂತಿ ಸೌಹಾರ್ದತೆಯ ಸಂಕೇತ ವಾಗಿರುವ ಮೊಹರಂ ಹಬ್ಬವನ್ನು ಜಾತಿ.ಮತ,ಪಂಥ ಮೀರಿ ಎಲ್ಲರೂ ಆಚರಣೆ ಮಾಡುತ್ತಾರೆ.

ಅದರಂತೆ ಜಿಲ್ಲೆಯ ಹುಲಿಕಟ್ಟಿ ಗ್ರಾಮದಲ್ಲಿ ದಶಕಗಳಿಂದಲೂ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

ಈ ಊರಲ್ಲಿ ಮುಸ್ಲಿಂ ಜನಾಂಗದವರು ಯಾರು ಇಲ್ಲದ್ದರಿಂದ ತಲೆ- ತಲೆಮಾರುಗಳಿಂದ ಮೊಹರಂ ಆಚರಿಸಿಕೊಂಡು ಬರಲಾಗುತ್ತಿದೆ.

ಮೊಹರಂ ಆರಂಭದ ದಿನದಿಂದ ಅಲೈದೇವರನ್ನು ಹಿಡಿಯುವಂತ ಹಿಂದೂಗಳು ಪಕ್ಕದ ಹೋತನಹಳ್ಳಿ ಮುಸ್ಲಿಂ ಧರ್ಮ ಗುರುವಿನ ಸಹಾಯದಿಂದ ಊರಿನ ಪ್ರಮುಖ ಗಣ್ಯರು ಗ್ರಾಮ ಪಂಚಾಯತಿ ಸದಸ್ಯರು,ಸೇರಿ ಎಲ್ಲ ತಯಾರಿಯನ್ನು ನಡೆಸುತ್ತಾರೆ ಮೊಹರಂ ಕೊನೆಯ ದಿನದಂದು ಗ್ರಾಮದ ಪ್ರಮುಖ ಬೀದಿಬೀದಿಗಳಲ್ಲಿ ದೇವರನ್ನು ಹೊತ್ತು ಮೆರವಣಿಗೆ ಮಾಡಲಾಗುತ್ತದೆ.

ಇನ್ನು ಹರಕೆ ಹೊತ್ತಂತವರು ಊರಿನ ಮುತ್ತೈದೆಯರು, ಹೆಣ್ಣು ಮಕ್ಕಳು ,ಹಿರಿಯರು ದೇವರ ದರ್ಶನಕ್ಕೆ ಆಗಮಿಸುವರು,ಒಟ್ಟಾರೆಯಲ್ಲಿ ಊರಿನ ಪ್ರಮುಖಕರು, ಗುರು ಹಿರಿಯರು, ಯುವಕರು, ಮಕ್ಕಳು ಸೇರಿ ಸಂಭ್ರಮದಿಂದ ಮೊಹರಂ ಹಬ್ಬವನ್ನು ಆಚರಿಸುವರು.

Edited By : Nagesh Gaonkar
PublicNext

PublicNext

09/08/2022 05:19 pm

Cinque Terre

27.19 K

Cinque Terre

0