ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಪಾವಗಡದಲ್ಲಿ 1550 ಅಡಿಗಳ ಮಹಾ ತ್ರಿವರ್ಣ ಧ್ವಜದ ಮೆರವಣಿಗೆ

ಪಾವಗಡ : ಸೋಮವಾರ ಪಟ್ಟಣದ ಹೆಲ್ಪ್ ಸೊಸೈಟಿ ಮತ್ತು ವಿವೇಕಾನಂದ ವಿದ್ಯಾ ಸಂಸ್ಥೆ ಹಾಗೂ ಪಾವಗಡ ತಾಲೂಕಿನ ಶಾಲಾ ಮಕ್ಕಳು ನಾಗರಿಕರು ದೇಶ ಪ್ರೇಮಿಗಳೊಂದಿಗೆ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ 1550 ಅಡಿಗಳ ಉದ್ದದ ಮಹಾ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ತ್ರಿವರ್ಣ ಧ್ವಜದ ಪ್ರದರ್ಶನ ಮೆರವಣಿಗೆ ಕಾರ್ಯಕ್ರಮಕ್ಕೆ ಪಾವಗಡ ತಾಲೂಕಿನ ಮುಖಂಡರುಗಳಾದ ಡಾ. ವೆಂಕಟರಾಮಯ್ಯ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಮುಖಂಡರಾದ ಮಾನಂ ವೆಂಕಟ ಸ್ವಾಮಿ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಸಿಪಿಐ ಲಕ್ಷ್ಮಿಕಾಂತ್, ಎಸ್ಐ ಗುರುನಾಥ್, ತಾಲೂಕು ಜನಪದ ಸಾಹಿತ್ಯ ಅಧ್ಯಕ್ಷ ಸತ್ಯ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕಟ್ಟಾ ನರಸಿಂಹ ಮೂರ್ತಿ,ಧ್ವಜ ತಯಾರಕ ರೊದ್ದo ಗ್ರಾಮದ ಲಕ್ಷ್ಮೀನಾರಾಯಣ ಗುಪ್ತಾ, ಕಾಲೇಜಿನ ಪ್ರಾಂಶುಪಾಲ ನಾಗೇಂದ್ರಪ್ಪ, ಉಪ ಪ್ರಾಂಶುಪಾಲ ನಾಗರಾಜ್ ಸೇರಿದಂತೆ ಇತರರು ಇದ್ದರು.

Edited By : Manjunath H D
PublicNext

PublicNext

09/08/2022 09:17 am

Cinque Terre

39.93 K

Cinque Terre

0