ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಗರ ಪಂಚಮಿ ಸ್ಪೆಷಲ್ : ಹಾಲು ಬದಲಿಗೆ ಕೋಳಿ ರಕ್ತಾಭಿಷೇಕ!

ವಿಜಯನಗರ: ನಾಗರ ಪಂಚಮಿಯಂದು ಸಾಮಾನ್ಯವಾಗಿ ಹುತ್ತಕ್ಕೆ ಹಾಲನ್ನ ಎರೆದು ಪೂಜೆ ಮಾಡುವುದು ವಾಡಿಕೆ. ಆದ್ರೆ ಜಿಲ್ಲೆಯ ಭತ್ತನಹಳ್ಳಿ ಗ್ರಾಮದ ನಿವಾಸಿಗಳು ಸ್ವಲ್ಪ ವಿಭಿನ್ನ. ಇಲ್ಲಿ ನಾಗರ ಪಂಚಮಿ ನಿಮಿತ್ತ, ಹುತ್ತಕ್ಕೆ ಕೋಳಿ ರಕ್ತ ನೈವೇದ್ಯವಾಗಿ ಪೂಜೆ ಮಾಡುತ್ತಾರೆ! ಹೌದು ಶ್ರಾವಣ ಮಾಸದ ಎರಡನೇ ಭಾನುವಾರದಂದು ಗ್ರಾಮದ ಕೊರಚ ಬುಡಕಟ್ಟು ಸಮುದಾಯದ ಜನ ಈ ಪೂಜೆಯನ್ನ ಮಾಡುತ್ತಾರೆ.

ಜಮೀನುಗಳಲ್ಲಿರುವ ಹುತ್ತಗಳಿಗೆ ಹೂವು, ಬಾಳೆ-ಹಣ್ಣು ತೆಂಗಿನಕಾಯಿ ಹಾಗೂ ಮಡಕೆ ಕಾಳನ್ನು ನೆನಸಿ ನೈವೇದ್ಯ ಮಾಡುತ್ತಾರೆ. ಹುತ್ತಕ್ಕೆ ಹೂವುಗಳಿಂದ ಅಲಂಕರಿಸಿ ಕೋಳಿ ರಕ್ತದಿಂದ ಅಭಿಷೇಕ ಮಾಡಿ ಪೂಜೆ ಸಲ್ಲಿಸುತ್ತಾರೆ. ಈ ಹಬ್ಬವು ಬುಡಕಟ್ಟು ಸಮುದಾಯದಿಂದ ನಡೆದುಕೊಂಡ ಬಂದ ಆಚರಣೆಯಾಗಿದೆ.

ತಮಗೆ ಹಾವುಗಳಿಂದ ರಕ್ಷಣೆ ಸಿಗಲಿ ಎಂದು ಕೋಳಿಯ ರಕ್ತದ ಅಭಿಷೇಕ ಮಾಡುತ್ತಾರೆ. ಕಾಡಿನಲ್ಲಿರೋ ಈ ಸಮುದಾಯ ಜನರಿಗೆ ಹಾವು ಕಚ್ಚದಂತೆ ವಿಶೇಷ ರೀತಿಯಲ್ಲಿ ಹರಕೆ ಮಾಡಿಕೊಳ್ತಾರೆ. ಈ ಪೂಜೆಗೆ ಮುನ್ನ ಒಂದು ದಿನ ಉಪವಾಸ ಕೂಡ ಮಾಡ್ತಾರೆ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

08/08/2022 06:08 pm

Cinque Terre

92.25 K

Cinque Terre

2