ತುಮಕೂರು: ಪೊಲೀಸರು ಎಂದರೆ ನಿತ್ಯವೂ ಒಂದಿಲ್ಲೊಂದು ಕಾರ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಆದರೆ ಕೆಲಸದ ಮಧ್ಯೆಯೂ ಕೊರಟಗೆರೆ ತಾಲೂಕಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಮತ್ತು ತಮ್ಮ ತಮ್ಮಲ್ಲಿರುವ ಅದ್ಭುತ ಕಲೆಯನ್ನು ಪ್ರದರ್ಶಸುತ್ತಾ ಬರ್ತಿರೋದು ನಿಜಕ್ಕೂ ಹೆಮ್ಮೆಯ ಸಂಗತಿ.
ರಂಗಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಡುವಿನ ವೇಳೆಯಲ್ಲಿ ಪೌರಾಣಿಕ ನಾಟಕಗಳ ಅಭಿನಯವನ್ನು ಕರಗತ ಮಾಡಿಕೊಂಡು ಉತ್ತಮ ಅಭಿನಯವನ್ನು ತಾಲೂಕಿನಾದ್ಯಂತ ಪ್ರದರ್ಶಿಸುತ್ತಾ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೊರಟಗೆರೆ ಪಟ್ಟಣದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಅಭಿಮಾನಿಗಳು ಬೆಳ್ಳಿ ಕಿರೀಟ ಧಾರಣೆ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಾಗಿ, ಅದೇ ರೀತಿ ರಂಗಕಲೆಯಲ್ಲಿ ಉತ್ತಮ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗೇ ಇವರಿಬ್ಬರಿಗೂ ಮೇಲಾಧಿಕಾರಿಗಳು ಸಹ ಶುಭ ಕೋರಿದ್ದಾರೆ.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ಮತ್ತು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇತರ ಶ್ರೀಗಳ ಮತ್ತು ಅಭಿಮಾನಿಗಳ ನೇತೃತ್ವದಲ್ಲಿ ಬೆಳ್ಳಿ ಕಿರೀಟ ನೀಡಿ ಅಭಿನಂದಿಸಲಾಗಿದೆ.
PublicNext
01/08/2022 01:31 pm