ವಿಜಯಪುರ: ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಜಗತ್ ಜ್ಯೋತಿ ಬಸವಣ್ಣನವರ 889 ಜಯಂತಿಯ ಅಂಗವಾಗಿ, ಕೂಡಲ ಸಂಗಮದಿಂದ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದ ವರೆಗೆ ಪಾದಯಾತ್ರೆ ಹಮ್ಮಿ ಕೊಳ್ಳಲಾಗಿದೆ. ಬಸವಣ್ಣ ತತ್ವಗಳು, ವಚನಗಳು ಜನರಿಗೆ ತಲುಪಿಸುವುದು ಈ ಪಾದಯಾತ್ರೆಯ ಧ್ಯೇಯವಾಗಿದೆ.
12 ನೇ ಶತಮಾನದಲ್ಲಿ ಬಸವಣ್ಣನವ್ರು ಸಮಾನತೆಗಾಗಿ ಹೋರಾಟ ಮಾಡಿದ್ದಾರೆ.ಆದ್ರೆ ಈಗ ಎಲ್ಲಿ ನೋಡಿದ್ರು ಧರ್ಮ- ಧರ್ಮಗಳ ಮಧ್ಯೆ ಸಂಘರ್ಷ ನಡೆಯುತ್ತಿದೆ. ಇದನ್ನ ತಪ್ಪಿಸಿ ಜನಗಳ ಮಧ್ಯೆ ಪ್ರೀತಿ-ವಿಶ್ವಾಸ ಬೆಳೆಯುವ ಹಾಗೆ ಮಾಡುವುದು ಪಾದಯಾತ್ರೆಯ ಮತ್ತೊಂದು ನಂಬಿಕೆ.
ಇಂದಿನ ಯುವಕರು ಮಟ್ಕ-ಗುಟ್ಕ, ಧೂಮಪಾನ, ಮದ್ಯಪಾನ ಅಂತ ಹಾಳಾಗಿದ್ದಾರೆ.ಈ ಯುವ ಶಕ್ತಿಯನ್ನ ಸರಿ ದಾರಿಗೆ ತರಬೇಕು, ಇನ್ನೂ ಮತ್ತೊಂದು ಎಲ್ಲಾ ಧರ್ಮದವ್ರು ಈ ಪಾದಯಾತ್ರೆಯನ್ನ ಮಾಡುತ್ತಿದ್ದಾರೆ ಅನ್ನೊದು ಈ ಪಾದಯಾತ್ರೆಯಲ್ಲಿ ಬಹಳ ವಿಶೇಷವಾಗಿದೆ. ಇನ್ನೂ ಪಾದಯಾತ್ರೆಯಲ್ಲಿ ಧರ್ಮವನ್ನ ಲೆಕ್ಕಿಸದ ಸಾವಿರಾರು ಜನ ಪಾಲ್ಗೊಂಡಿದ್ದಾರೆ. ಪಾದಯಾತ್ರೆಯಲ್ಲಿ ಎಲ್ಲಾ ದೇವರುಗಳ ಚಿತ್ರವನ್ನ ಹಾಕಿ ಜನರ ಮನಸ್ಸಿನಲ್ಲಿ ಭಾವೈಕ್ಯ ಮೆರೆದಿದ್ದಾರೆ.
PublicNext
23/05/2022 09:33 pm