ಪಬ್ಲಿಕ್ ನೆಕ್ಸ್ಟ್ ವರದಿ:ಈರಣ್ಣ ವಾಲಿಕಾರ
ಶಿಗ್ಗಾಂವ: ಹಳ್ಳಿಗಳಲ್ಲಿ ಹಬ್ಬ-ಉತ್ಸವಗಳ ಆಚರಣೆ ಮಾಡೋದನ್ನು ನೋಡಲು ಎರಡು ಕಣ್ಣುಗಳು ಸಾಲದು. ನಾವೆಲ್ಲರೂ ಒಂದೆ ಎಂಬ ಭಾವದಿಂದ ಹಳ್ಳಿಯ ಜನರು ಒಗ್ಗೂಡಿ ಹಬ್ಬಗಳನ್ನು ಆಚರಿಸುತ್ತಾರೆ. ಹೀಗೆ ಡೊಳ್ಳು ಬಡಿತ, ಪುರಾಣ, ಎತ್ತುಗಳ ಮೆರವಣಿಗೆ, ಚಕ್ಕಡಿ ಮೇಲೆ ಬಸವಣ್ಣನವರ ಭಾವಚಿತ್ರ ಇಟ್ಟುಕೊಂಡು ಮೆರವಣಿಗೆ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಶಿಗ್ಗಾಂವ ತಾಲ್ಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ.
ಅಡವಿಸೋಮಾಪುರ ಗ್ರಾಮದಲ್ಲಿ ಶ್ರೀ ಕಲಬುರಗಿ ಶರಣಬಸವೇಶ್ವರರ 35ನೇ ವರ್ಷದ ಪುರಾಣ ಮಹಾಮಂಗಳೋತ್ಸವ ನಿಮಿತ್ತವಾಗಿ, ಹಸುಗಳನ್ನೇ ದೇವರೆಂದು ಪೂಜಿಸುತ್ತಿರುವ ಇವರು, ಇಂದು ಜಗಜ್ಯೋತಿ ಬಸವಣ್ಣನವರ ಜಯಂತಿ ಅಂಗವಾಗಿ, ಊರಿನ ತುಂಬ ರೈತರು ಚಕ್ಕಡಿ ಹೂಡಿಕೊಂಡು ಮೆರವಣಿಗೆ ನಡೆಸಿದ್ದಾರೆ. ಧಾರ್ಮಿಕವಾಗಿ ಗ್ರಾಮದವರು ಗುರುಹಿರಿಯರು, ಯುವಕರು ಸೇರಿಕೊಂಡು ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
PublicNext
03/05/2022 04:39 pm