ಕಡೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ಉಳಿಗೆರೆ ಕರಿಯಮ್ಮ ದೇವಿ ಜಾತ್ರೆಯಲ್ಲಿ ಮಾಜಿ ಶಾಸಕ ವೈಎಸ್‌ವಿ ದತ್ತಣ್ಣ ಮನಬಿಚ್ಚಿ ಕುಣಿದಿದ್ದಾರೆ.
ಇಂದು ಉಳಿಗೆರೆ ಕರಿಯಮ್ಮ ದೇವಿ ಜಾತ್ರೆ ಕಡೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಜಾತ್ರೆ ವೇಳೆ ತಾಳ-ಮೇಳ ಸದ್ದಿಗೆ ಮೈಮರೆತ ಜೆಡಿಎಸ್ ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ತಮ್ಮ ಅಭಿಮಾನಿಗಳ ಜೊತೆ ಮನಬಿಚ್ಚಿ ಕುಣಿದಿದ್ದಾರೆ. ಸ್ವತಃ ದತ್ತ ಅವರೇ ಈ ದೃಶ್ಯವನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ದತ್ತಣ್ಣರ ಕುಣಿತ ಕಂಡ ನೆಟ್ಟಿಗರು ಮೆಚ್ಚಿ ಅಹುದಹುದೆಂದಿದ್ದಾರೆ.
PublicNext
27/04/2022 10:30 pm