ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್ನಲ್ಲಿ ಸಿದ್ಧವಾಗಿದೆ ರಾಮಾನುಜಾಚಾರ್ಯರ ಪ್ರತಿಮೆ: ಇಂದು ಭವ್ಯ ಉದ್ಘಾಟನೆ

ಹೈದರಾಬಾದ್: 11ನೇ ಶತಮಾನದ ಭಕ್ತಿ ವೈಷ್ಣವ ಹಾಗೂ ಕ್ರಾಂತಿಕಾರಿ ಸಮಾಜ ಸುಧಾರಕ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಹೈದರಾಬಾದ್ನಲ್ಲಿ ಸಿದ್ದವಾಗಿದೆ. 216 ಅಡಿ ಎತ್ತರ ಇರುವ ಈ ಪ್ರತಿಮೆ ಸ್ಥಳವನ್ನು ಇಂದು(ಫೆ.5) ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಲಿದ್ದಾರೆ.

ಇನ್ನು 120 ಕೆ.ಜಿ ರಾಮಾನುಜಾಚಾರ್ಯರ ಚಿನ್ನದ ದೇವರನ್ನು ಫೆ 13ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟಿಸಲಿದ್ದಾರೆ. ಹಾಗೂ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಡೈನಾಮಿಕ್ ಫೌಂಟೇನ್ ಉದ್ಘಾಟಿಸಲಿದ್ದಾರೆ. ಅನೇಕ ರಾಜಕೀಯ ನಾಯಕರು, ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರತಿಮೆ ಅನಾವರಣ ಅಂಗವಾಗಿ ಫೆ.2ರಿಂದ 5 ಸಾವಿರ ಪುರೋಹಿತರು ಯಜ್ಞ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

05/02/2022 08:03 am

Cinque Terre

37.6 K

Cinque Terre

1