ನವದೆಹಲಿ: ಕಾಶ್ಮೀರದ ಗಡಿಯಲ್ಲಿ ಸೈನಿಕರೊಂದಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಣೆ ಮಾಡಲಿದ್ದಾರೆ. ಇನ್ನು ಪ್ರಧಾನಿ ಆಗಮನ ಮತ್ತು ಹಬ್ಬದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿರುವ ನೌಶೇರಾ ಸೆಕ್ಟರ್ ನ ಮುಂಭಾಗದ ಪ್ರದೇಶವನ್ನು ಸುಂದರವಾಗಿ ಅಲಂಕರಿಸಿ ಸಜ್ಜುಗೊಳಿಸಲಾಗಿದೆ.
2014ರಲ್ಲಿ ಪ್ರಧಾನ ಮಂತ್ರಿಯಾದಾಗಿನಿಂದ ನರೇಂದ್ರ ಮೋದಿ ಅವರು ದೀಪಾವಳಿಯಂದು ಗಡಿ ಔಟ್ ಪೋ ಸ್ಟ್ ಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರತಿ ಬಾರಿ ಸೈನಿಕರಿಗೆ ಸಿಹಿತಿಂಡಿಗಳು ಮತ್ತು ಇತರ ಉಡುಗೊರೆಗಳನ್ನು ನೀಡುತ್ತಾರೆ. ನರೇಂದ್ರ ಮೋದಿ 2019ರಲ್ಲೂ ರಜೌರಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.
PublicNext
03/11/2021 10:28 pm