ದೆಹಲಿ:ನಮಗೆ ರಾಮಾಯಣ-ಮಹಾಭಾರತ ಇವೆಲ್ಲ ಮಹಾನ್ ಕಥೆಗಳಾಗಿಯೇ ಕಾಣುತ್ತವೆ. ಅವುಗಳನ್ನ ಅಷ್ಟೇ ಗೌರವದಿಂದಲೂ ನೋಡುತ್ತೇವೆ. ಆದರೆ ದೆಹಲಿಯ ಏಮ್ಸ್ ಕಾಲೇಜಿನ ವಿದ್ಯಾರ್ಥಿಗಳು ಇಡೀ ರಾಮಾಯಣದ ಸನ್ನಿವೇಶಗಳನ್ನೆಅಣಕವಾಡಿದ್ದಾರೆ.
ಇಂದಿನ ಸೋಷಿಯಲ್ ಮೀಡಿಯಾದ ಪರಿಭಾಷೆಯನ್ನೆ ಅದರಲ್ಲಿ ಬಳಸಿಕೊಂಡು ಗಂಭೀರವಾದ ರಾಮಾಯಣವನ್ನ ಅದ್ವಾನ ಮಾಡಿಹಾಕಿದ್ದಾರೆ. ಆ ವೀಡಿಯೋನೇ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಮಾಯಣದ ಕೆಲವು ಸನ್ನಿವೇಶಗಳನ್ನ ತೆಗೆದುಕೊಂಡು ಏಮ್ಸ್ ವಿದ್ಯಾರ್ಥಿಗಳು ರಾಮಾಯಣ ಮಾಡಿದ್ದಾರೆ.ಇದನ್ನ ಒಳ್ಳೆ ಪ್ರಯೋಗ ಅಂತಲೇ ಅಂದುಕೊಳ್ಳೋಣ. ಆದರೆ ಇದನ್ನ ನೋಡಿದಾಗ ನಿಮ್ಗೆ ಎಲ್ಲೂ ಇದು ಒಳ್ಳೆ ಪ್ರಯೋಗ ಅನಿಸೋದೇ ಇಲ್ಲ.ಬಳಸಿದ ಭಾಷೆ ನಟಿಸೋ ನಟನೆ ಎಲ್ಲವೂ ಕೆಟ್ಟದಾಗಿದೆ. ದಶರಥನ ಪಾತ್ರ,ಕೈಕೇಯಿ,ಅಷ್ಟೇ ಯಾಕೆ ರಾಮನ ಪಾತ್ರವನ್ನೂ ಇಲ್ಲಿ ಏನೇನೋ ಮಾಡಿ ಹಾಕಲಾಗಿದೆ. ಇದನ್ನ ಕಂಡೋರು ಈಗ ವೀಡಿಯೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಏನ್ ಬಂತಪ್ಪ ಕಾಲ ಅಂತಲೂ ಸಿಟ್ಟಾಗುತ್ತಿದ್ದಾರೆ.
PublicNext
16/10/2021 06:39 pm