ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಆನೆ, ಅಶ್ವರೋಹಿ ದಳಕ್ಕೆ ಅಂತಿಮ ಹಂತದ ತಾಲೀಮು

ಮೈಸೂರು: ವಿಶ್ವ ಖ್ಯಾತಿ, ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳಿಗೆ ಇಂದು‌ ಮೂರನೇ ಹಾಗೂ ಅಂತಿಮ ಹಂತದ ಕುಶಲ ತೋಪು ತಾಲೀಮು ನಡೆಯಿತು.

ಅರಮನೆಯ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲೀಮು ನಡೆಯುತ್ತಿದ್ದು,

ಕುಶಲ ತೋಪುಗಳನ್ನ ಸಿಡಿಸಿ ಆನೆ ಹಾಗೂ ಅಶ್ವರೋಹಿ ದಳ ಬೆದರದಂತೆ ತರಬೇತಿ, ಮಾರ್ಗದರ್ಶನ ನೀಡಲಾಯಿತು.

ಈ ತಾಲೀಮು ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಖುದ್ದು ಹಾಜರಿದ್ದು, ವೀಕ್ಷಿಸಿದರು.

ಈಗಾಗಲೇ ಎರಡು ಬಾರಿ ಕುಶಲತೋಪು ತಾಲೀಮು ನಡೆಸಲಾಗಿದೆ. ಇಂದಿನ ತಾಲೀಮಿನಲ್ಲಿ

ಏಳು ಆನೆಗಳು ಹಾಗೂ ಅಶ್ವರೋಹಿ ದಳ ಭಾಗಿಯಾಗಿತ್ತು.

Edited By : Nagesh Gaonkar
PublicNext

PublicNext

08/10/2021 03:16 pm

Cinque Terre

34.17 K

Cinque Terre

0