ಬಳ್ಳಾರಿ: ಮಕ್ಕಳನ್ನು ಶಾಲೆಗೆ ಕಳುಹಿಸದೇ ಕೂಲಿ ಕೆಲಸಕ್ಕೆ ಕಳುಹಿಸುವ ಪೋಷಕರಿಗೆ ದಂಡ ಹಾಕಲಾಗುವುದು ಎಂದು ಜಿಲ್ಲೆಯ ಕುರುಗೋಡು ಸಮೀಪದ ಕೋಳೂರು ಗ್ರಾಮದಲ್ಲಿ ಡಂಗೂರ ಸಾರಲಾಗಿದೆ.
ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ರಿಂದ 10ತರಗತಿ ಒಟ್ಟು 184 ವಿದ್ಯಾರ್ಥಿಗಳು ಇದ್ದಾರೆ. ಆದರೆ ಶಾಲೆ ಪ್ರಾರಂಭವಾರದೂ ವಿದ್ಯಾರ್ಥಿಗಳ ಹಾಜರಾತಿ 50 ದಾಟಿಲ್ಲ. ಇದು ಶಿಕ್ಷಕರಿಗೆ ತಲೆನೋವು ಸೃಷ್ಟಿಸಿದೆ. ಮಕ್ಕಳನ್ನು ಶಾಲೆಗೆ ಬರುವ ನಿಟ್ಟಿನಲ್ಲಿ ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು, ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರು ಸೇರಿ ಸಭೆಯನ್ನು ನಡೆಸಿದ್ದಾರೆ. ಕೆಲ ಪೋಷಕರು ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದು ಗಮನಕ್ಕೆ ಬಂದಲ್ಲಿ ನೇರವಾಗಿ ಅವರ ಮನೆಗೆ ಅಧಿಕಾರಿಗಳು ದಂಡ ಹಾಕಲಿದ್ದಾರೆ. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ.
PublicNext
28/08/2021 05:19 pm