ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಗತ್ ಸಿಂಗ್ ಕಲಾಕೃತಿ ಸೂಪರ್... 39,000 ಶರ್ಟ್ ಗುಂಡಿಗಳಿಂದ ತಯಾರಿಸಿರೋ ಇದರ ಸೊಬಗು ಹೇಗಿದೆ ಗೊತ್ತಾ...?

ದಾವಣಗೆರೆ: ದೇಶದೆಲ್ಲೆಡೆ 75 ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮ. ಎಲ್ಲೆಲ್ಲೂ ಹಬ್ಬದ ವಾತಾವರಣ. ಸಡಗರದಿಂದ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ.

ದಾವಣಗೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭಾರತ್ ಕಾಲೋನಿಯ ನಿವಾಸಿ, ಕಲಾವಿದ ಪ್ರದೀಪ್ ಈ ಬಾರಿ ಡಿಫರೆಂಟ್ ಆಗಿ ತಮ್ಮದೇ ರೀತಿಯಲ್ಲಿ ಸೆಲಬ್ರೇಟ್ ಮಾಡ್ತಿದ್ದಾರೆ.ಬರೋಬ್ಬರಿ 39,000 ಶರ್ಟ್ ಗುಂಡಿಗಳಿಂದ ತಯಾರಿಸಿದ ವೀರ ಹೋರಾಟಗಾರ ಭಗತ್ ಸಿಂಗ್ ಭಾವಚಿತ್ರ ರೂಪಿಸುವ ಮೂಲಕ ಎಲ್ಲರ ಆಕರ್ಷಣೆಗೆ ಪಾತ್ರರಾಗಿದ್ದಾರೆ‌.

ತನ್ನ 23 ನೇ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಭಾರತದ ಹೆಮ್ಮೆಯ ಪುತ್ರ " ಭಗತ್ ಸಿಂಗ್ "ರವರ ಕಲಾಕೃತಿಯನ್ನು ದಾವಣಗೆರೆ ಜಿಲ್ಲೆಯ ಗವರ್ನಮೆಂಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ನೋಡಿದರೆ ಮಗದೊಮ್ಮೆ ನೋಡುವಂತ ರೀತಿಯಲ್ಲಿ ಚಿತ್ತಾಕರ್ಷಕವಾಗಿ ರೂಪಿಸಲಾಗಿರುವ ಈ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಭಗತ್ ಸಿಂಗ್ ರ ಈ ಕಲಾಕೃತಿ ನೋಡಲು ಜನರು ಸಹ ಬರುತ್ತಿದ್ದು, ಕಲಾವಿದನ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

15/08/2021 02:34 pm

Cinque Terre

148.74 K

Cinque Terre

9