75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ರಾಷ್ಟ್ರಪತಿ ಭಾಷಣ ಇಂದು ಸಂಜೆ 7ಗಂಟೆಯಿಂದ ದೂರದರ್ಶನ ಹಿಂದಿಯಲ್ಲಿ ಪ್ರಸಾರವಾಗಲಿದೆ. ಇನ್ನುಳಿದಂತೆ ಆಲ್ ಇಂಡಿಯಾ ರೇಡಿಯೋದ ಎಲ್ಲ ರಾಷ್ಟ್ರೀಯ ನೆಟ್ ವರ್ಕ್ ಗಳಲ್ಲೂ ಪ್ರಸಾರಗೊಳ್ಳಲಿದೆ.
ರಾಷ್ಟ್ರಪತಿಯವರು ಹಿಂದಿಯಲ್ಲೇ ಮಾತನಾಡಲಿದ್ದು, ಬಳಿಕ ರಾತ್ರಿ 9.30ರಿಂದ ಎಲ್ಲ ಪ್ರಾದೇಶಿಕ ಚಾನಲ್ ಗಳಲ್ಲಿ, ಆಯಾ ಸ್ಥಳೀಯ ಭಾಷೆಗಳಲ್ಲಿ ಪ್ರಸಾರಗೊಳ್ಳಲಿದೆ.
ಪ್ರಸಕ್ತ ವರ್ಷದ ಸ್ವಾತಂತ್ರ್ಯ ದಿನಾಚರಣೆ ಭಾರತಕ್ಕೆ ವಿಶೇಷ. ಕಾರಣ ಇದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಆಜಾದಿ ಕಾ ಅಮೃತಮಹೋತ್ಸವ್ ದ ಕಾರ್ಯಕ್ರಮಗಳ ಸರಣಿಗೆ ಚಾಲನೆ ನೀಡಿದ್ದಾರೆ. ಇದು 2023ರ ಸ್ವಾತಂತ್ರ್ಯೋತ್ಸವದವರೆಗೂ ಮುಂದುವರಿಯಲಿದೆ.
ಇನ್ನು ನಾಳೆ ಮುಂಜಾನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡುವರು.
PublicNext
14/08/2021 04:22 pm