ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧ್ವಜಾರೋಹಣದ ಬಳಿಕ ಮಸೀದಿ ನಿರ್ಮಾಣಕ್ಕೆ ಚಾಲನೆ

ಲಕ್ನೋ: ಅಯೋಧ್ಯೆ ಹೊರವಲಯದಲ್ಲಿರುವ ಧನ್ನಿಪುರ ಹಳ್ಳಿಯಲ್ಲಿ ಗಣರಾಜ್ಯೋತ್ಸವ ದಿನ ತ್ರಿವರ್ಣ ಧ್ವಜಾರೋಹಣದ ಬಳಿಕ ಮಸೀದಿ ನಿರ್ಮಾಣಕ್ಕೆ ಸಾಂಕೇತಿಕ ಚಾಲನೆ ನೀಡಲಾಯಿತು.

ಮಸೀದಿ ನಿರ್ಮಾಣ ಟ್ರಸ್ಟ್ ಅಧ್ಯಕ್ಷರಾದ ಜಫರ್ ಅಹ್ಮದ್ ಫಾರೂಖೀ, ಮಂಗಳವಾರ ಬೆಳಗ್ಗೆ 8.45ಕ್ಕೆ ರಾಷ್ಟ್ರ ಧ್ವಜಾರೋಹಣ ಮಾಡಿದರು. ಟ್ರಸ್ಟ್ ನ 12 ಸದಸ್ಯರು ಗಿಡ ನೆಟ್ಟರು. ಇಲ್ಲಿಗೆ ಅಧಿಕೃತವಾಗಿ ನಿರ್ಮಾಣಕಾರ್ಯ ಆರಂಭವಾಗಿದೆ ಎಂದು ಘೋಷಿಸಲಾಗಿದೆ. ವಾಸ್ತವವಾಗಿ ನಿರ್ಮಾಣ ಕಾರ್ಯವನ್ನು ಗಣರಾಜ್ಯೋತ್ಸವದಂದೇ ಆರಂಭಿಸಲಾಗುವುದೆಂದು ಈ ಹಿಂದೆಯೇ ಟ್ರಸ್ಟ್ ಘೋಷಿಸಿತ್ತು.

Edited By : Nirmala Aralikatti
PublicNext

PublicNext

27/01/2021 07:57 am

Cinque Terre

64.15 K

Cinque Terre

3