ಸಾಹಿತಿ ಪ್ರೋ. ದೊಡ್ಡರಂಗೇಗೌಡ ಅವರು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ವಲಯ ಹಾಗೂ ದೊಡ್ಡರಂಗೇಗೌಡರ ಒಡನಾಡಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಇನ್ನು ಈಗಿನ ಯುಗದಲ್ಲಿ ಎಲ್ಲರು ಇಂಗ್ಲಿಷ್ ಭಾಷೆಗೆ ಮೊರೆಹೋಗಿದ್ದಾರೆ ಇದರಿಂದ ನಾವು ಹಿಂದಿಯನ್ನೇಕೆ ತಿರಸ್ಕರಿಸಬೇಕು. ಹಿಂದಿ ನಮ್ಮ ರಾಷ್ಟ್ರ ಭಾಷೆ ಇಲ್ಲಿ ಕನ್ನಡ ಹೇಗೋ ಹಾಗೆಯೇ ಉತ್ತರ ಭಾರತದಲ್ಲಿ ಹಿಂದಿಗೂ ಅಷ್ಟೇ ಮಹತ್ವವಿದೆ. ಆದ್ದರಿಂದ ನಾವು ರಾಷ್ಟ್ರಭಾಷೆಯನ್ನೇಕೆ ತಿರಸ್ಕರಿಸಬೇಕು ಎಂದು ದೊಡ್ಡರಂಗೇಗೌಡ ಪ್ರಶ್ನಿಸಿದ್ದಾರೆ.
ಕನ್ನಡಿಗರು ಸೌಮ್ಯ ಸ್ವಭಾವದವರು, ವಿಶ್ವದ ಯಾವುದೇ ಭಾಗಕ್ಕೂ ಹೋದರೂ ಕನ್ನಡಿಗರಿಗೆ ಗೌರವ ಸಿಗುತ್ತದೆ. ಅದಕ್ಕೆ ಅಲ್ಲಿನ ಸಾಂಸ್ಕೃತಿಕ ವೈವಿಧ್ಯ ಹಾಗೂ ಸಾಹಿತ್ಯ ಶ್ರೀಮಂತಿಕೆ ಕಾರಣ. ಕನ್ನಡದ ಬಗ್ಗೆ ಕೀಲರಿಮೆಯನ್ನು ಬಿಟ್ಟು ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಹಾಗೂ ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಕಲಿತರೆ ತಪ್ಪಿಲ್ಲ. ಜೊತೆಗೆ ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿರುವುದರಿಂದ ಅದನ್ನೂ ಕಲಿಯಬೇಕು. ಬರೀ ಇಂಗ್ಲೀಷ್ ಗೆ ದಾಸರಾಗುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.
PublicNext
23/01/2021 03:06 pm