ಮೈಸೂರು : ಆರ್ ಎಸ್ ಎಸ್ ಕಾರ್ಯಕರ್ತರು ಅಯೋಧ್ಯಾ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕ್ರೋಢೀಕರಣ ಕಾರ್ಯ ಶುರು ಮಾಡಿದ್ದಾರೆ. ನಾಡಿನ ಹಲವಾರು ಗಣ್ಯರು ಈಗಾಗಲೇ ದೇಣಿಗೆ ನೀಡಿದ್ದಾರೆ.
ಸಂಘ ಪರಿವಾರದವರು ಹಲವರನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಕಾರ್ಯಕರ್ತರು ಕೆ ಎಸ್ ಭಗವಾನರ ಮೈಸೂರಿನ ಕುವೆಂಪುನಗರದ ಮನೆಗೆ ತೆರಳಿ ನಿಧಿ ಸಮರ್ಪಣಾ ಅಭಿಯಾನದ ಮಾಹಿತಿ ಪುಸ್ತಕ ನೀಡಿದ್ದಾರೆ.
ಸದಾ ವಿವಾದಿತ ಹೇಳಿಕೆ ನೀಡುತ್ತಿದ್ದ, ಪ್ರಭು ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದ ಭಗವಾನ್, ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ತುಂಬು ಹೃದಯದಿಂದ ಬೆಂಬಲಿಸಿದ್ದಾರೆ.
ಆರ್ ಎಸ್ ಎಸ್ ಕಾರ್ಯಕರ್ತರ ಜೊತೆ ಸೌಜನ್ಯತೆಯಿಂದ ವರ್ತಿಸಿದ್ದಾರೆ. ನಿಧಿ ಸಮರ್ಪಣಾ ಅಭಿಯಾನ ಮುಂದುವರಿಯಲಿ, ಆದಷ್ಟು ಬೇಗ ಅಭಿಯಾನ ಮುಗಿಸಿ ಅಂತ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ಸಂಘ ಪರಿವಾರದ ಅಭಿಯಾನಕ್ಕೆ ನೈತಿಕ ಬೆಂಬಲ ಸೂಚಿಸಿರುವ ಭಗವಾನರ ನಡೆ ಅಚ್ಚರಿ ಮೂಡಿಸಿದೆ.
PublicNext
17/01/2021 11:20 am