ವರ್ಷದ ಮೊದಲ ಹಬ್ಬ ಸಂಕ್ರಾಂತಿ ಈ ಹಬ್ಬವನ್ನು ಸುಗ್ಗಿ ಹಬ್ಬ ಅಂತಲೂ ಕರೆಯುತ್ತಾರೆ.
ಸಡಗರ, ಸಂಭ್ರಮದ ಮಕರ ಸಂಕ್ರಾಂತಿಯನ್ನು ಈ ಬಾರಿ ಜನವರಿ 14 ರ ಗುರುವಾರದಂದು ಆಚರಿಸಲಾಗುತ್ತದೆ.
ಸುಗ್ಗಿಯ ಹಬ್ಬ ಎಂದೇ ಕರೆಯಲ್ಪಡುವ ಹಬ್ಬದಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ.
ರೈತರು ಬೆಳೆದ ಬೆಳೆಯನ್ನು ಸಂಭ್ರಮದಿಂದ ರಾಶಿ ಮಾಡಿ 'ಸುಗ್ಗಿ ಹಬ್ಬ'ವಾಗಿ ಇದನ್ನು ಆಚರಿಸುತ್ತಾರೆ.
ಈ ಹಬ್ಬವನ್ನು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಎನ್ನುತ್ತಾರೆ ಮತ್ತು ಅತ್ಯಂತ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
ಇನ್ನು ಸಂಕ್ರಾಂತಿಗೆ ಎಳ್ಳು, ಬೆಲ್ಲ, ಕಬ್ಬು ಸಾಮಾನ್ಯ. ಇವುಗಳನ್ನು ಹಂಚುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ರೂಢಿಯಲ್ಲಿದೆ.
ರೈತರಿಗೆ ಸುಗ್ಗಿ ಕಾಲವಾಗಿರುವುದರಿಂದ ಕೊಂಚ ಬಿಡುವು ಸಿಗುತ್ತದೆ. ಹಾಗಾಗಿ ಕೆಲವು ಪ್ರದೇಶಗಳಲ್ಲಿ ಕಿಚ್ಚು ಹಾಯಿಸುವ ಪದ್ಧತಿ ಚಾಲ್ತಿಯಲ್ಲಿದೆ.
ಸಂಕ್ರಾಂತಿ ವಿಶೇಷವಾದ ಹಬ್ಬದಂದು ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ಉತ್ಸವ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ.
PublicNext
13/01/2021 07:27 am