ತುಮಕೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತೊಮ್ಮೆ 'ವಿದ್ಯಾರ್ಥಿ'ಯಾದರು ಮತ್ತು ‘ಬೆಂಚ್‌ಮೇಟ್’ ಪಕ್ಕದಲ್ಲಿ ಕುಳಿತು ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ಪಾವಗಡ ರಾಮಕೃಷ್ಣ ಆಶ್ರಮ ಆಯೋಜಿಸಿದ್ದ 'ದೂರತರಂಗ ಶಿಕ್ಷಣ' ಕಾರ್ಯಕ್ರಮವನ್ನು ಎನ್.ಆರ್.ನಾರಾಯಣಮೂರ್ತಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ಉತ್ತಮ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಉತ್ತಮ ಚಿಂತನೆ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ನಾನು ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿ ದೂರ ತರಂಗ ಶಿಕ್ಷಣ ಯೋಜನೆ ಮಕ್ಕಳಿಗೆ ದೊರಕಬೇಕು' ಎಂದು ಹೇಳಿದರು.
ತಮ್ಮ ಬ್ಯಾಚ್ ಮೇಟ್ ಆಗಿದ್ದ ಸಾಹಿತಿ ಹಾಗೂ ವಿಧಾನ ಪರಿಷತ್ ಸದಸ್ಯ ದೊಡ್ಡರಂಗೇಗೌಡ ಮತ್ತು ಸಚಿವ ಸುರೇಶ್ ಕುಮಾರ್ ಅವರ ಜೊತೆ ಚರ್ಚಿಸಿದರು. 74 ವರ್ಷದ ನಾರಾಯಣ ಮೂರ್ತಿ ಅವರು ತಮ್ಮ ಶಿಕ್ಷಕರಾದ ರೇವಣ ಸಿದ್ದಯ್ಯ ಮತ್ತು ನರಸಿಂಹ ಕೃಷ್ಣನ್ ಅವರನ್ನು ಜ್ಞಾಪಿಸಿಕೊಂಡರು. ಅವರಿಬ್ಬರು ತಮಗೆ ಹೇಗೆ ಸ್ಫೂರ್ತಿಯಾಗಿದ್ದರು ಎಂಬುದನ್ನು ವಿವರಿಸಿದರು.
PublicNext
10/01/2021 04:01 pm