ಕೊಪ್ಪಳ: ಸಾಮಾನ್ಯ ಜನರು ಸೌಹಾರ್ದಕ್ಕೆ ಸಾಕ್ಷಿಯಾಗಿರುತ್ತಾರೆ. ಒಬ್ಬರ ಕಷ್ಟಕ್ಕೆ ಒಬ್ಬರಾಗುತ್ತಾರೆ. ಅವರಿಗೆ ಧರ್ಮ ಮುಖ್ಯವಲ್ಲ. ಮಾನವೀಯತೆ ಮುಖ್ಯ. ಸದ್ಯ ಕೊಪ್ಪಳದ ಮುಸ್ಲಿಮರು ಈ ಮಾತನ್ನು ಸಾಬೀತು ಮಾಡಿದ್ದಾರೆ.
ದೆಹಲಿಯ ಸಿಂಘೂ ಗಡಿಯಲ್ಲಿ ನಡೆಯುತ್ತಿರುವ ಅನ್ನದಾತರ ಬೃಹತ್ ಹೋರಾಟಕ್ಕೆ ಸಹಾಯಾರ್ಥವಾಗಿ ಕೊಪ್ಪಳದ ಮುಸ್ಲಿಮರು ದೇಣಿಗೆ ಸಂಗ್ರಹಿಸಿದ್ದಾರೆ. ಕೊಪ್ಪಳದ ಮಸೀದಿಯೊಂದರ ದ್ವಾರದ ಮುಂದೆ ಜೋಳಿಗೆ ಹಿಡಿದು ನಿಂತು ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಮಸೀದಿ ಬಂದಿದ್ದ ಅನೇಕರು ತಮ್ಮ ಕೈಲಾದಷ್ಟು ಹಣವನ್ನು ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ. ಈ ಮೂಲಕ ಬಂದ ಹಣವನ್ನು ಮಸೀದಿಯ ಕಮೀಟಿಯವರು ದೆಹಲಿಯ ಹೋರಾಟ ನಿರತ ರೈತ ನಾಯಕರಿಗೆ ಕಳುಹಿಸಿದ್ದಾರೆ.
PublicNext
09/01/2021 09:57 pm