ನರಗುಂದ : ಭಕ್ತಿ ಸಾಕ್ಷಾತ್ಕಾರಕ್ಕೆ ಇಂದು ಎಂದಿಗೂ ಹಳ್ಳಿಗಳು ಹಾಗೂ ಹಳ್ಳಿಗರ ಆಚರಣೆಗಳೇ ಪ್ರಧಾನ. ಇಂತಹ ಭಕ್ತಿ ಆಚರಣೆ ಲಿಂಗೈಕ್ಯ ಡಾಕ್ಟರ್ ಪುಟ್ಟರಾಜ ಕವಿ ಗವಾಯಿಗಳರವರ 12ನೇ ವರ್ಷದ ಪುಣ್ಯಸ್ಮರಣೆ ಹಾಗೂ ಪ್ರಥಮ ವರ್ಷದ ರಥೋತ್ಸವ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವಕ್ಕೆ ನರಗುಂದ ತಾಲೂಕಿನ ಬೆಳವಣಿಗೆ ಗ್ರಾಮ ಸಾಕ್ಷಿಯಾಗಿ ಗದುಗಿನ ಪುಟ್ಟರಾಜ ಗವಾಯಿಗಳ ಮಠದಿಂದ ಬಳುವಳಿಯಾಗಿ ನೀಡಿದ ಮಠದ ರಥಯಾತ್ರೆ ಬೆಳವಣಿಕಿ ಗ್ರಾಮದಲ್ಲಿ ಯಶಸ್ವಿಯಾಗಿ ನೆರವೇರಿತು.
ನೂತನ ಪಲ್ಲಕ್ಕಿ ಉತ್ಸವದಲ್ಲಿ ಲಿಂಗೈಕ್ಯ ಪುಟ್ಟಯ್ಯಜ್ಜನವರ ಬೆಳ್ಳಿ ಮೂರ್ತಿ ತೇರಿನ ಕಳಸದ ಮೆರವಣಿಗೆ ಕುಂಭ ಹೊತ್ತ ಮಹಿಳೆಯರ ಸಂಚಾರ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬೆಳವಣಿಕಿ ಗ್ರಾಮದ ಸಕಲ ಭಕ್ತಾಧಿಗಳ ಸಮ್ಮುಖದಲ್ಲಿ ಪರಮಪೂಜ್ಯ ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಶಾಂತವೀರ ಶರಣರು, ಅಭಿನವ ಚನ್ನಬಸವ ಮಹಾಸ್ವಾಮಿಗಳು, ಕಲ್ಲಯ್ಯಜ್ಜನವರು ಪಾಲ್ಗೊಂಡಿದ್ದರು.
PublicNext
06/09/2022 08:43 pm