ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಜನರ ಮನಸೂರೆಗೊಂಡ ಮಹಿಳೆಯರ ಬಸವ ಬುತ್ತಿ, ಉಡಿ ತುಂಬುವ ಅದ್ದೂರಿ ಕಾರ್ಯಕ್ರಮ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಒಂದು ತಿಂಗಳವರೆಗೆ ನಡೆದ ಶ್ರೀಮುರುಘೇಂದ್ರ ಶಿವಯೋಗಿಗಳ ಚರಿತಾಮೃತ ಪ್ರವಚನದ ಸಮಾರೋಪ ಸಮಾರಂಭ ಹಾಗೂ ಗ್ರಾಮದ ಮಹಿಳೆಯರ ಬಸವ ಬುತ್ತಿ, ಉಡಿ ತುಂಬುವ ಕಾರ್ಯಕ್ರಮ ನಿನ್ನೆ ಅದ್ದೂರಿಯಾಗಿ ಜರುಗಿ ನೋಡುಗರ ಮನ ಸೂರೆಗೊಂಡಿತು.

ಬಸವ ಬುತ್ತಿ ಕಾರ್ಯಕ್ರಮಕ್ಕೆ ನದಿ ಇಂಗಳಗಾಂವದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಅಥಣಿ ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿಯವರು ಗ್ರಾಮದ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಪುತ್ಥಳಿಗೆ ನಿನ್ನೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಹಿಳೆಯರು ದಂಡಿ ಕಟ್ಟಿಕೊಂಡು ತಲೆ ಮೇಲೆ ತಮ್ಮ ಮನೆಯಿಂದ ತಂದ ಬುತ್ತಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮಲ್ಲಯ್ಯನ ದೇವಸ್ಥಾನ ಆವರಣ ತಲುಪಿ ಸಮಾವೇಶಗೊಂಡಿತು. ನಂತರ ಪ್ರತಿ ಮನೆ ಮನೆಗಳಿಂದ ತಂದ ಬುತ್ತಿಯನ್ನು ಒಂದೆಡೆ ಸೇರಿಸಿ ಇಡೀ ಗ್ರಾಮದ ಜನತೆ ಒಂದಾಗಿ ಸಾಮರಸ್ಯದಿಂದ ಪ್ರಸಾದ ಸ್ವೀಕರಿಸಿದರು.

ಈ ವೇಳೆ ಸಿದ್ದಲಿಂಗ ಸ್ವಾಮೀಜಿ ಅವರು ಮಾತನಾಡಿ, ಒಂದು ತಿಂಗಳ ಈ ಕಾರ್ಯಕ್ರಮದಲ್ಲಿ ಲಿಂಗದೀಕ್ಷೆ, ತಾಯಂದಿರುಗಳಿಗೆ ಉಡಿ ತುಂಬುವ, ನಿತ್ಯ ಪ್ರಸಾದ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆದುಕೊಂಡು ಬಂದಿರುವುದು ಶ್ಲಾಘನೀಯ. ಕಲ್ಯಾಣ ಅಥವಾ ಕೈಲಾಸ ಬೇರೆ ಎಲ್ಲಿಯೂ ಇಲ್ಲ ಎಲ್ಲವೂ ಕಟಗೇರಿ ಗ್ರಾಮದಲ್ಲಿದೆ ಎಂದರು.

ಈ ವೇಳೆ ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ, ಶಿವಾನಂದ ಖೋತ, ಗುರುಪಾದ ಸವದಿ, ನರಸಪ್ಪ ಮಹಿಷವಾಡಗಿ, ಗುರುಶಾಂತ ಕರಡಿಮಠ ಸೇರಿದಂತೆ ಗ್ರಾಮದ ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ತಾಯಂದಿರು ಭಾಗವಹಿಸಿದ್ದರು.

ವರದಿ : ಸಂತೋಷ ಬಡಕಂಬಿ

Edited By : Manjunath H D
PublicNext

PublicNext

28/08/2022 08:08 am

Cinque Terre

69.98 K

Cinque Terre

0

ಸಂಬಂಧಿತ ಸುದ್ದಿ