ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೃಂಗೇರಿ ಶ್ರೀಗಳ ಬೆಂಗಳೂರು ಪುರಪ್ರವೇಶ. ಭವ್ಯ ಸ್ವಾಗತ

ಬೆಂಗಳೂರು: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶೃಂಗೇರಿ ಸನ್ನಿಧಾನಂಗಳಾದ ಶ್ರೀ ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ತಮ್ಮ ದಿಗ್ವಿಜಯ ಯಾತ್ರೆಯ ಅಂಗವಾಗಿ ಬೆಂಗಳೂರು ಮಹಾನಗರಕ್ಕೆ ಆಗಮಿಸಿದರು. ಶ್ರೀಗಳನ್ನು ಬಸವನಗುಡಿಯ ಮಾಗಡಿ ಕಾರ್ಣಿಕರ ವೇದ ಪಾಠಶಾಲೆಯಿಂದ ಶಂಕರ ಮಠದ ತನಕ ರಥದಲ್ಲಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.

ಶಾಸಕರಾದ ಉದಯ ಗರುಡಾಚಾರ್, ಯು.ಬಿ. ವೆಂಕಟೇಶ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಕಟ್ಟೆಸತ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಹಸ್ರಾರು ಭಕ್ತರ ಜಯಘೋಷ, ವಾದ್ಯಗಳ ನಿನಾದದೊಂದಿಗೆ ಶಂಕರ ಮಠದ ತನಕ ರಥದಲ್ಲಿ ಶ್ರೀಗಳ ಮೆರವಣಿಗೆ ಸಾಗಿತು.

ಇದಕ್ಕೂ ಮೊದಲು ನೈಸ್ ರಸ್ತೆ ಜಂಕ್ಷನ್ ನಲ್ಲಿ ಶ್ರೀಗಳ‌ ಪುರಪ್ರವೇಶ ನೆರವೇರಿತು. ನೈಸ್ ಮುಖ್ಯಸ್ಥ, ಮಾಜಿ ಶಾಸಕ ಅಶೋಕ್ ಖೇಣಿಯವರು ಶ್ರೀಗಳನ್ನು ಬರಮಾಡಿಕೊಂಡರು. ನೈಸ್ ಕಚೇರಿಗೆ ಭೇಟಿ ಕೊಟ್ಟು ಶ್ರೀಗಳು ಆಶೀರ್ವದಿಸಿದರು. ಶ್ರೀ ಮಠದ ಭಕ್ತರಾದ ಎಸ್.ವಿ. ನಾಗರಾಜ್ ಫಲ- ತಾಂಬೂಲ ನೀಡಿ ಗುರುಕಾಣಿಕೆ ಸಮರ್ಪಿಸಿದರು.

Edited By : Somashekar
PublicNext

PublicNext

14/05/2022 05:10 pm

Cinque Terre

87.41 K

Cinque Terre

0