ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಮತ್ತಷ್ಟು ಕಳೆಗಟ್ಟಲಿದೆ. ಜಂಬೂ ಸವಾರಿಯ ಆನೆಗಳಿಗೆ ಅಲಂಕಾರ ಕಾರ್ಯ ನಡೆದಿದೆ. ನವ-ವಧುವರರಂತೆ ದಸರಾ ಆನೆಗಳು ಸಿಂಗಾರಗೊಳ್ಳುತ್ತಿವೆ. ಇಂದು ಸಂಜೆ ಐದು ಗಂಟೆಯಿಂದ ದಸರಾ ಜಂಬೂ ಸವಾರಿ ಆರಂಭವಾಗಲಿದೆ.
ಇದಕ್ಕಾಗಿ ಮಧ್ಯರಾತ್ರಿಯಿಂದಲೇ ಗಜಪಡೆಗೆ ಬಣ್ಣದ ಚಿತ್ತಾರ ಮಾಡಲಾಗುತ್ತಿದೆ. ನಾಗಲಿಂಗಪ್ಪ ಮತ್ತು 6 ಜನ ಕಲಾವಿದರ ತಂಡದಿಂದ ಆನೆಗಳಿಗೆ ಬಣ್ಣದಿಂದ ಸಿಂಗರಿಸುವ ಕಾರ್ಯ ನಡೆದಿದೆ. ಸೊಂಡಿಲ ಮೇಲೆ ಮೈಸೂರು ರಾಜ ಮನೆತನದ ಗಂಡಭೇರುಂಡ ಲಾಂಛನ, ದಂತದ ಮೇಲೆ ಗಿಳಿ ಆಕಾರ, ಕಾಲು ಮತ್ತು ಬಾಲಕ್ಕೆ ಹೂ ಬಳ್ಳಿಗಳ ಬಣ್ಣದ ವಿನ್ಯಾಸ, ಕಿವಿಗಳಿಗೆ ಶಂಕ ಚಕ್ರ ಆಕೃತಿ ಚಿತ್ರ ಬರೆಯಲಾಗಿದೆ.
PublicNext
15/10/2021 08:10 am