ಬೆಳಗಾವಿ:ನವರಾತ್ರಿ ಹಬ್ಬ ಶುರು ಆಗಿದೆ. ನವ ದಿನ ನವ ವರ್ಣದರ್ಪಣೆ ನಡೆಯುತ್ತದೆ.ಮಹಿಳೆಯರು 9 ದಿನ 9 ಬಣ್ಣದ ಸೀರೆಯುಟ್ಟು ಹಬ್ಬದ ಸಡಗರದಲ್ಲಿ ಭಾಗಿ ಆಗ್ತಾರೆ. ಆದರೆ ಕುಂದಾನಗರಿ ಬೆಳಗಾವಿಯಲ್ಲಿ ನವರಾತ್ರಿ ಹಬ್ಬ ವಿಶೇಷವಾಗಿಯೇ ನಡೆಯುತ್ತದೆ. ಅದರಂಗವಾಗಿ ನಡೆದ ಇಲ್ಲಿಯ ದುರ್ಗಾ ಮಾತಾ ದೌಡು ವಿಶೇಷವಾಗಿಯೇ ಇದೆ. ಅದರ ಟಾಪ್ ವೀವ್ ನ ಒಂದ್ ವೀಡಿಯೋ ಬಲು ಆಕರ್ಷಕವಾಗಿದೆ.
ಕುಂದಾನಗರಿ ಬೆಳಗಾವಿ ಸಿಹಿಗೂ ಫೇಮಸ್. ಗಡಿ ವಿವಾದಕ್ಕೂ ಹೆಸರುವಾಸಿ.ಗಣೇಶ್ ಹಬ್ಬವೂ ಇಲ್ಲಿ ವಿಶೇಷವಾಗಿ ನೆರವೇರುತ್ತದೆ. ನವರಾತ್ರಿ ಹಬ್ಬವನ್ನ ಕೂಡ ಜನ ಇಲ್ಲಿ ಸ್ಪೆಷಲ್ ಆಗಿಯೇ ಇಲ್ಲಿ ಆಚರಿಸುತ್ತಾರೆ. ಅದರಂತೆ ಈಗ ದುರ್ಗಾ ಮಾತಾ ದೌಡು ಮಾಡಿದ್ದಾರೆ. ಸಾಲು ಸಾಲು ಸಾವಿರಾರು ಯುವಕರು ಯುವತಿಯರು ಇದರಲ್ಲಿ ಪಾಲ್ಗೊಂಡಿದ್ದಾರೆ. ನವರಾತ್ರಿಯ ವೈಭವವನ್ನ ವಿಶೇಷವಾಗಿಯೇ ಕಟ್ಟಿಕೊಟ್ಟಿದ್ದಾರೆ.
PublicNext
08/10/2021 11:10 am