ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಡ ಹಬ್ಬದ ಸಂಭ್ರಮ ಎಲ್ಲೆಡೆ ರಾರಾಜಿಸುತ್ತಿದೆ. ಸದ್ಯ ವಿಕ್ರಮಾ ಆನೆಗೆ ಮದಾ ಬಂದ ಕಾರಣ ಪಟ್ಟದ ಆನೆಯಾಗಿ ಧನಂಜಯ ಆಯ್ಕೆಯಾಗಿದೆ.
ದಸರಾ ಹಬ್ಬದಲ್ಲಿ ಆನೆಗಳದ್ದೇ ದರ್ಬಾರ್ ಇದನ್ನು ನೋಡುವುದೇ ಚಂದ. ಇನ್ನುನಿಶಾನೆ ಆನೆಯಾಗಿ ಗೋಪಾಲಸ್ವಾಮಿ ತಯಾರಾಗಿದ್ದಾನೆ. ಸದ್ಯ ಅರಮನೆ ಆವರಣದಲ್ಲಿ ಪೂಜೆಗೆ ಆನೆಗಳು ಶೃಂಗಾರಗೊಳ್ಳುತ್ತಿವೆ.ಇನ್ನೇನು ಕೆಲವೇ ಕ್ಷಣಗಳಲ್ಲಿಅರಮನೆಯ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಈ ಎಲ್ಲ ಆನೆಗಳು ಭಾಗಿಯಾಗಲಿವೆ.
ಸದ್ಯ ಆನೆಗೆ ವಿವಿಧ ಬಣ್ಣಗಳಿಂದ ಶೃಂಗಾರ ನಡೆಯುತ್ತಿದೆ. ಆನೆಯ ಸೊಂಡಿಲಿಗೆ ಗಂಡಬೇರುಂಡ ಬರೆದು ಶೃಂಗಾರ ಮಾಡಲಾಗಿದೆ. ಇನ್ನು ಭೋಗ ನರಸಿಂಹ ರಾಜ್, ಜಗದೀಶ್ ರಾಜ್, ನಂದ್ ಕಿಶೋರ್, ರಾಘವೇಂದ್ರ ಸಿಂಗ್ ಕಳೆದ 30 ವರ್ಷದಿಂದ ಆನೆಗೆ ಬಣ್ಣ ಮಾಡುತ್ತಿದ್ದಾರೆ.
PublicNext
07/10/2021 09:18 am