ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ʼಗಣಪತಿʼ ಮೂರ್ತಿ ಖರೀದಿ ಮುನ್ನ ಈ ಸಂಗತಿಗಳು ನೆನಪಿರಲಿ…..!

ಯಾವುದೇ ಕೆಲಸ ಪ್ರಾರಂಭ ಮಾಡುವ ಮೊದಲು ಗಣೇಶನ ಆರಾಧನೆ ಮಾಡುವುದರಿಂದ ನಾವು ಅಂದುಕೊಂಡ ಕೆಲಸ ಅಡೆತಡೆ ಇಲ್ಲದೆ ಆಗುತ್ತವೆ ಇದು ನಮ್ಮ ನಂಬಿಕೆ. ಸದ್ಯ ಚೌತಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳ ಬಾಕಿಯಿದೆ. ಬಪ್ಪನ ಆಗಮನಕ್ಕೆ ಭರ್ಜರಿ ತಯಾರಿ ನಡೆದಿದೆ. ಮನೆಗೆ ಗಣಪತಿ ಮೂರ್ತಿ ತರುವ ವೇಳೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.

ಗಣೇಶ ಮೂರ್ತಿ ಖರೀದಿಗೆ ಹೋಗುವ ವೇಳೆ ಶುದ್ಧ ಹಾಗೂ ಹೊಸ ವಸ್ತ್ರವನ್ನು ಧರಿಸಿ ಹೋಗಿ. ಗಣಪತಿ ಸೊಂಡಿಲು ಎಡಕ್ಕಿರುವಂತೆ ನೋಡಿಕೊಳ್ಳಿ. ದೊಡ್ಡ ಸೊಂಡಿಲಿನ ಮೂರ್ತಿ ಬಹಳ ಶುಭಕರ.

ಮನೆಗೆ ಮೂರ್ತಿ ತಂದ ಮೇಲೆ ಬೆಳ್ಳಿ ಬಟ್ಟಲಿನ ಮೇಲೆ ಸ್ವಸ್ಥಿಕವನ್ನು ಬಿಡಿಸಿ ನಂತ್ರ ಅದ್ರ ಮೇಲೆ ಮೂರ್ತಿ ಇಡಿ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತ್ರ ಪೂಜೆ ಬಗ್ಗೆ ಗಮನವಿರಲಿ.

ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಅರ್ಪಿಸಿ. ಬೆಳಿಗ್ಗೆ ಹಾಗೂ ಸಂಜೆ ದೀಪ ಬೆಳಗಿ ಪೂಜೆ ಮಾಡಬೇಕು. ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ ನೀಡಿ.

Edited By : Nirmala Aralikatti
PublicNext

PublicNext

07/09/2021 01:39 pm

Cinque Terre

32 K

Cinque Terre

2